ದಾವಣಗೆರೆ-ಡಿಸೆಂಬರ್ ದಾವಣಗೆರೆಯ ಸಾಹಿತ್ಯ ಸಂಗ್ರಹದ ಬರಹಗಾರರಾದ ನಲ್ಲೂರು ಲಕ್ಷ್ಮಣ್ ರಾವ್ ನರಹರಿ ರೇವಣಕರ್‌ರವರಆಧ್ಯಾತ್ಮಿಕ ಶುಭಾಶಯ ರತ್ನ’ ಬೃಹತ್ ಗ್ರಂಥ ಇತ್ತೀಚಿಗೆ ನಗರದ ವಿನೋಬನಗರದ ಮೊದಲನೇ ಮುಖ್ಯ ರಸ್ತೆಯಲ್ಲಿರುವ ಶ್ರೀಮತಿ ಗೌರಮ್ಮ ನರಹರಿ ಶೇಟ್ ಸಭಾಭವನದಲ್ಲಿ ಉಡುಪಿ ಜಿಲ್ಲೆಯ ಸೊದೆ ಮಠದ ಶ್ರೀ ಶ್ರೀ ಶ್ರೀ ವಿಶ್ವವಲ್ಲಭವತೀರ್ಥ ಶ್ರೀಪಾದಂಗಳವರು ಲೋಕಾರ್ಪಣೆ ಮಾಡಿ ಶುಭ ಹಾರೈಸಿದರು ಎಂದು ಕಲಾಕುಂಚದ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಸೋದೆ ಶ್ರೀ ಗುರು ವಾದಿರಾಜಮಠ ದೈವಜ್ಞ ಬ್ರಾಹ್ಮಣರ ಶಿಷ್ಯ ವೃಂದದ ದಾವಣಗೆರೆ ಜಿಲ್ಲಾ ಸಮಿತಿ ಅಧ್ಯಕ್ಷರಾದ ನಲ್ಲೂರು ಶಾಂತರಾವ್ ರಾಜಕುಮಾರ್, ಸಮಿತಿ ಸದಸ್ಯರಾದ ಕಮಲಾಕರ ರೇವಣಕರ್ ಹಾಗೂ ಈ ಗ್ರಂಥದ ಕರ್ತರಾದ ನಲ್ಲೂರು ಲಕ್ಷ್ಮಣ್ ರಾವ್ ನರಹರಿ ರೇವಣಕರ್ ಮುಂತಾದವರು ಉಪಸ್ಥಿತರಿದ್ದರು.
ನಲ್ಲೂರು ಲಕ್ಷ್ಮಣ್ ರಾವ್ ರವರ ಆಧ್ಯಾತ್ಮಿಕ ಶುಭಾಶಯ ರತ್ನ’ ಕೃತಿ ಲೋಕಾರ್ಪಣೆ
RELATED ARTICLES