ದಾವಣಗೆರೆ :ಉಡುಪಿ ಜಿಲ್ಲೆಯ ಸಾಲಿಗ್ರಾಮದ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದಿಂದ ಇತ್ತೀಚಿಗೆ ದಾವಣಗೆರೆಯ ಗೌರಮ್ಮ ನರಹರಿ ಶೇಟ್ ಸಭಾಂಗಣದಲ್ಲಿ ನಲ್ಲೂರು ಲಕ್ಷ್ಮಣರಾವ್ ರೇವಣಕರ್ ಅವರಿಗೆ ಅವರ ಅರ್ಧ ಶತಮಾನದ ಸಾಧನೆಗಳನ್ನು ಗುರುತಿಸಿ“ಸರಸ್ವತಿ ಸಂಸ್ಕೃತಿ ಪುರಸ್ಕಾರ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು ಎಂದು ಪ್ರತಿಷ್ಠಾನದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಶ್ರೀ ಕ್ಷೇತ್ರ ಅವರಗೊಳ್ಳದ ಪುರವರ್ಗ ಶ್ರೀ ಮಠದ ಪರಮಪೂಜ್ಯ ಶ್ರೀ ಷ.ಬ್ರ. ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳು, ಪ್ರತಿಷ್ಠಾನದ ಸಂಸ್ಥಾಪಕರಾದ ನಲ್ಲೂರ್ ಅರುಣಾಚಲ ರೇವಣಕರ್, ಅಧ್ಯಕ್ಷರಾದ ಪ್ರೇಮ ಅರುಣಾಚಲ ರೇವಣಕರ್, ಸಂಧ್ಯಾ ಲಕ್ಷ್ಮಣ್‌ರಾವ್, ನಲ್ಲೂರು ಕಾರ್ತಿಕ್ ರೇವಣೇಕರ್, ಸುಪ್ರೀತಾ ಕಾರ್ತಿಕ್ ರೇವಣಕರ್, ದಾವಣಗೆರೆ ದೈವಜ್ಞ ಸಮಾಜದ ಅಧ್ಯಕ್ಷರಾದ ಪ್ರಶಾಂತ್ ವಿಶ್ವನಾಥ್ ವರ್ಣಿಕರ್, ಜ್ಯೋತಿ ಗಣೇಶ್ ಶೆಣೈ ಮುಂತಾದವರು ಉಪಸ್ಥಿತರಿದ್ದರು. ದಾವಣಗೆರೆಯ ದೈವಜ್ಞ ಬ್ರಾಹ್ಮಣ ಸಮಾಜ, ರೇವಣಕರ್ ಪರಿವಾರ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸದಸ್ಯರು ಪದಾಧಿಕಾರಿಗಳು ನಲ್ಲೂರು ಕುಟುಂಬದವರು ಲಕ್ಷ್ಮಣರಾವ್ ರೇವಣಕರ್ ಅವರಿಗೆ ತುಂಬಾ ಸಂತೋಷದಿಂದ ಅಭಿಮಾನದಿಂದ ಅಭಿನಂದಿಸಿದರು.