ಕಾಸರಗೋಡು ಜಿಲ್ಲೆ ನೀರ್ಚಾಲು ಕನ್ನೆಪ್ಪಾಡಿಯ ಕೊಡ್ಯಮ್ಮೆ ಅಂತಲ ಶ್ರೀ ಮೊಗೇರ ಚಾವಡಿಯಲ್ಲಿ ತುಲು ಲಿಪಿ ನಾಮಫಲಕ

0
149

ನೀರ್ಚಾಲು ಕನ್ನೆಪ್ಪಾಡಿಯ ಕೊಡ್ಯಮ್ಮೆ ಅಂತಲ ಶ್ರೀ ಮೊಗೇರ ಚಾವಡಿಯಲ್ಲಿ ತುಲು ಲಿಪಿ ನಾಮಫಲಕವನ್ನು ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಕೊಂಡೆವೂರು ಇವರ ದಿವ್ಯ ಹಸ್ತದಲ್ಲಿ ಅನಾವರಣಗೊಳಿಸಲಾಯಿತು. ಜೈ ತುಲುನಾಡ್ (ರಿ.) ಸಂಘಟನೆಯು ತುಲು ಲಿಪಿ, ಭಾಷೆ ಮತ್ತು ಸಾಹಿತ್ಯದ ಬಗ್ಗೆ ನಡೆಸುತ್ತಿರುವ ಹಲವಾರು ಚಟುವಟಿಕೆಗಳು ಹಾಗು ತುಲು ಲಿಪಿ ನಾಮಫಲಕದ ಅಭಿಯಾನ ಇವೆಲ್ಲಾವನ್ನು ಕಂಡು ತನಗೆ ತುಂಬಾ ಖುಷಿಯಾಗಿದೆ ಎಂದು ಕೊಂಡೆವೂರು ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ಹೇಳಿಕೊಂಡರು. ಕೊಂಡೆವೂರು ಮಠದಲ್ಲಿಯೂ ಮುಂದೊಂದು ದಿನ ತುಲು ಲಿಪಿ ನಾಮಫಲಕದ ಅಳವಡಿಕೆಗೆ ಜೈ ತುಲುನಾಡ್ (ರಿ.) ಸಂಘಟನೆಯು ಕೈ ಜೋಡಿಸಬೇಕೆಂದರು. ಕೊಡ್ಯಮ್ಮೆ ಅಂತಲ ಶ್ರೀಮೊಗೇರ ಚಾವಡಿ ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷರು ಡಾ. ಶ್ರೀನಿಧಿ ಸರಳಾಯ ಬದಿಯಡ್ಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ತಂತ್ರಿವರ್ಯರಾದ ಬ್ರಹ್ಮಶ್ರೀ ಮಹೇಶ್ ಶಾಂತಿ ಹೆಜಮಾಡಿ, ದೈವಜ್ಞರಾದ ಜ್ಯೋತಿಷ್ಯ ರತ್ನ ಮೋಹನ್ ಮಾಯಿಪ್ಪಾಡಿ , ಜೈ ತುಲುನಾಡ್ (ರಿ.) ಕಾಸ್ರೋಡ್ ಘಟಕದ ಕಾರ್ಯದರ್ಶಿ ಜಗನ್ನಾಥ ಕಂಡತ್ತೋಡಿ, ಖಜಾಂಜಿ ಉತ್ತಮ ಯು ಹಾಗೂ ಇತರ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು. ಕೊಡ್ಯಮೆ ಅಂತಲ ಶ್ರೀಮೊಗೇರ ಚಾವಡಿ ಪ್ರತಿಷ್ಠಾ ಮಹೋತ್ಸವ ಸಮಿತಿ ಪ್ರದಾನ ಸಂಚಾಲಕರಾದ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಸ್ವಾಗತ ಭಾಷಣ ಮಾಡಿದರು.ಮಾಧ್ಯಮ ಸಮಿತಿ ಸಂಚಾಲಕರಾದ ಶ್ರೀ ಜಯ ಮಣಿಯಂಪಾರೆ ಧನ್ಯವಾದ ಗೈದರು. ಕಾರ್ಯಕ್ರಮವನ್ನು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಸುಂದರ ಕಟ್ನಡ್ಕ ನಿರೂಪಿಸಿದರು.

LEAVE A REPLY

Please enter your comment!
Please enter your name here