ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ನಡೆಸುತ್ತಿರುವ ಸಮಾಜಮುಖಿ ಕಾರ್ಯ ಎಲ್ಲರಿಗೂ ಮಾದರಿ – ಮುಂಡ್ಕೂರು ಸಾಯಿನಾಥ್ ಶೆಟ್ಟಿ
ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಸಂಘದ ಅಧ್ಯಕ್ಷ ಬೀರೊಟ್ಟು ದಿನೇಶ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಸಂಘದ ೨೪ನೇ ವರ್ಷಾಚರಣೇ ಅಂಗವಾಗಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಸಭಾಂಗಣದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಜರಗಿತು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಶಿಕ್ಷಣ ಸಂಸ್ಥೆಯ ನಿವೃತ್ತ ಅಧ್ಯಾಪಕರಾದ ಮುಂಡ್ಕೂರು ಸಾಯಿನಾಥ್ ಶೆಟ್ಟಿ ಅವರು ತುಳು ಮಾತೆಯ ಭಾವಚಿತ್ರಕ್ಕೆ ಮಾಲಾರ್ಪಾಣೆ ಮಾಡಿ, ಪುಷ್ಪರ್ಚನೆ ಸಲ್ಲಿಸಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದವರು ತುಳುನಾಡಿನ ಆಟಿ ತಿಂಗಳಲ್ಲಿ ಹಿರಿಯರು ಆಚರಿಸಿಕೊಂಡು ಬಂದ ಸಂಪ್ರದಾಯ, ಆಚಾರ-ವಿಚಾರ, ವೈಜ್ಞಾನಿಕ ಸಂಗತಿ ಯುವ ಸಮುದಾಯಕ್ಕೆ ತಿಳಿಸಿಕೊಡುವ ಕಾರ್ಯ ಇಂತಹ ಆಚರಣೆಯಿಂದ ನಮ್ಮತನದ ಉಳಿವು ಸಾಧ್ಯ., ಗ್ರಾಮೀಣ ಭಾಗದಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ನಡೆಸುತ್ತಿರುವ ಸಮಾಜಮುಖಿ ಕಾರ್ಯ ಎಲ್ಲರಿಗೂ ಮಾದರಿ ಎಂದರು.
ಕರ್ನಾಟಕ ಮತ್ತು ಮಹಾರಾಷ್ಟ್ರ ಧರ್ಮಶ್ರೀ ರಿಲೀಫ್ ಫೌಂಡೇಶನ್‌ನ ಸಂಸ್ಥಾಪಕರಾದ ಬೈಂದೂರು ನಾಗರಾಜ್ ಆರ್. ಸುವರ್ಣ ಅವರ ಉದ್ಯಮ ಕ್ಷೇತ್ರದ ಸಾಧನೆಗೆ ಉದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ ಗೌರವಾಧ್ಯಕ್ಷರಾದ ಕುಂಟಲಗುಂಡಿ ರಾಜು ಶೆಟ್ಟಿ, ಕಾರ್ಯದರ್ಶಿ ವೀಣಾ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಪೂಜಾರಿ ಮೊದಲಾದವರಿದ್ದರು.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಕಾರ್ಯಕ್ರಮ ನಿರೂಪಿಸಿದರು, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕಾಸರಬೈಲು ಸುರೇಶ್ ಸ್ವಾಗತಿಸಿದರು, ಪೂರ್ವಾಧ್ಯಕ್ಷ ಬೋಳ ಉದಯ ಅಂಚನ್ ಸನ್ಮಾನಿತರ ಪರಿಚಯ ವಾಚಿಸಿದರು, ಕಾರ್ಯಕ್ರಮ ನಿರ್ದೇಶಕಿ ಹರಿಣಿ ಪೂಜಾರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳಿಗೆ ತುಳುನಾಡ ಶಾಲು ಹೊದಿಸಿ ವೀಳ್ಯದೆಲೆ-ಅಡಿಕೆ ನೀಡಿ ಸ್ವಾಗತಿಸಲಾಯಿತು, ಸ್ಮರಣಿಕೆ ಬದಲು ಗೆಂದಲಿ ಸೀಯಾಳ ನೀಡಿ ಅತಿಥಿಗಳನ್ನು ಗೌರವಿಸಲಾಯಿತು ನಂತರ ಸ್ಥಳೀಯ ಪ್ರತಿಭೆಗಳಿಂದ ಸಂಗೀತ ಕಾರ್ಯಕ್ರಮ ಜರಗಿತು.
ಬಾಯಲ್ಲಿ ನೀರೂರಿಸುವ ಆಟಿ ತಿಂಗಳ ೩೩ ಬಗೆಯ ತಿನಸುಗಳು: ಬೆಲ್ಲ-ನೀರು, ಜೀರಿಗೆದ ಕಷಾಯ, ಕುಕ್ಕುದ ಉಪ್ಪಡ್, ನೆಲ್ಲಿಕಾಯಿದ ಉಪ್ಪಡ್, ಕುಡುತ ಚಟ್ನಿ, ತಿಮರೆ ಚಟ್ನಿ, ಪುನರೆ ಪುಳಿತ ಚಟ್ನಿ, ಕುಕ್ಕುದ ಚಟ್ನಿ, ಪದೆಂಗಿದ ಕೋಸಂಬರಿ, ತೆಕ್ಕರೆ ತಲ್ಲಿ, ತೊಜಂಕ್ ಬೋಲೆದ ಸುಕ್ಕ, ನುರ್ಗೆ ತೊಪ್ಪುದ ಸುಕ್ಕ, ತೇವುದ ಪುಳಿ ಮುಂಚಿ, ಉಪ್ಪಡ್ ಪಚ್ಚಿರ್, ಖಾರ ಮುಂಚಿ, ಸೆಂಡಿಗೆ, ಗುಜ್ಜೆದ ಚಿಪ್ಸ್, ಉರ್ದುದ ಹಪ್ಪಳ, ಖಾರದ ಹಪ್ಪಳ, ಪೋಡಿ, ತೆಕ್ಕರೆದ ಅಡ್ಯೆ, ಗೆಂಡದಡ್ಡೆ, ಅರೆಪುದ ಪುಂಡಿ, ಪತ್ರೊಡ್ಡೆ, ಬಟಾಟೆ ಬಟಾಣಿ ಗಸಿ, ಕಜೆ ಅರಿತ ಗಂಜಿ, ಉರ್ಪೆಲ್ ಅರಿತ ನುಪ್ಪು, ಕುಡುತ ಸಾರ್, ಅರಿತ ಅಪ್ಪ, ಲಡ್ಡು, ಅರಿತ ಪಾಯಸ, ಅಲೆ (ಮಜ್ಜಿಗೆ), ಬಚ್ಚಿರೆ ಬಜ್ಜೆಯಿ