Wednesday, September 11, 2024
Homeಕಾರ್ಕಳನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ರಕ್ಷಾ ಬಂಧನ ಕಾರ್ಯಕ್ರಮ

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ರಕ್ಷಾ ಬಂಧನ ಕಾರ್ಯಕ್ರಮ

ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಮತ್ತು ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ನೇತೃತ್ವದಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ರಂಗಮಂದಿರದಲ್ಲಿ ಆ 12.ರಂದು ರಕ್ಷಾ ಬಂಧನ ಕಾರ್ಯಕ್ರಮ ಸಾಂಪ್ರದಾಯಿಕವಾಗಿ ಜರಗಿತು.

ಈ ಸಂದರ್ಭದಲ್ಲಿ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ
ಅಧ್ಯಕ್ಷತೆ ವಹಿಸಿ ಮಾತನಾಡಿದವರು ಜಗತ್ತಿನಲ್ಲಿ ಸ್ವಾರ್ಥರಹಿತ ಸಂಬಂಧವೆಂದರೆ ಅದು ಅಣ್ಣ ತಂಗಿಯರ ಸಂಬಂಧ ಹೀಗಾಗಿ ಶ್ರಾವಣ ಹುಣ್ಣಿಮೆಯ ವಿಶೇಷ ದಿನದಂದು ಸಹೋದರಿಯರು ತಮ್ಮ ಸಹೋದರರಿಗೆ ರಾಖಿ
ಕಟ್ಟುವ ಮೂಲಕ ರಕ್ಷಾ ಬಂಧನ ಆಚರಿಸುತ್ತಾರೆ ಎಂದರು.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ.
ಪೂಜಾರಿ ಮಾತನಾಡಿ ಭಾರತ ದೇಶದ ಧಾರ್ಮಿಕ ಹಬ್ಬವಾಗಿರುವ ಈ ಹಬ್ಬದಲ್ಲಿ ಸಹೋದರಿಯರಿಂದ ರಾಖಿ
ಕಟ್ಟಿಸಿಕೊಂಡ ಸಹೋದರರು ಸದಾ ನಿಮ್ಮ ರಕ್ಷಣೆ ನಮ್ಮ ಹೊಣೆ ಎಂಬ ಮಾತನ್ನು ಪಾಲಿಸಿಕೊಂಡು
ಹೋಗುವ ಸಂಪ್ರದಾಯಕ್ಕೆ ಈ ಹಬ್ಬ ಸಾಕ್ಷಿಯಾಗಿದೆ ಎಂದರು. ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ಮಹಿಳಾ ಸದಸ್ಯರು ಸಂಘದ ಸಹೋದರ ಸದಸ್ಯರಿಗೆ ಆರತಿ ಬೆಳಗಿ, ಕುಂಕುಮ ಹಚ್ಚಿ, ಸಿಹಿ ತಿನ್ನಿಸಿ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಕಾರ್ಯಕ್ರಮ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸುರೇಶ್ ಕಾಸ್ರಬೈಲು, ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಪೂರ್ವಾಧ್ಯಕ್ಷರಾದ ಆನಂದ ಪೂಜಾರಿ, ಸತೀಶ್ ಪೂಜಾರಿ, ಉದಯ ಅಂಚನ್, ಅಬ್ಬನಡ್ಕ ಭಜನಾ ಮಂಡಳಿಯ ಗೌರವಾಧ್ಯಕ್ಷ ರಾಜೇಶ್ ಕೋಟ್ಯಾನ್, ನಿಕಟ ಪೂರ್ವಾಧ್ಯಕ್ಷೆ ಸುಲೋಚನಾ ಕೋಟ್ಯಾನ್, ಅಬ್ಬನಡ್ಕ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಯೋಗೀಶ್ ಆಚಾರ್ಯ, ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಕಾರ್ಯದರ್ಶಿ ವೀಣಾ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಪೂಜಾರಿ, ಸದಸ್ಯರಾದ ಹರೀಶ್ ಪೂಜಾರಿ, ಸುರೇಶ್ ಅಬ್ಬನಡ್ಕ, ಲೀಲಾ ಪೂಜಾರಿ, ಹರಿಣಿ ಪೂಜಾರಿ, ಪುಷ್ಪ ಕುಲಾಲ್, ಗೀತಾ ಶೆಟ್ಟಿ, ಸಂಧ್ಯಾ ಶೆಟ್ಟಿ, ವೀಣಾ ಆಚಾರ್ಯ, ಅನ್ನಪೂರ್ಣ ಕಾಮತ್, ಶಾಂತರಾಮ್ ಕುಲಾಲ್ ಹಾಗೂ ಅಬ್ಬನಡ್ಕ ಭಜನಾ ಮಂಡಳಿಯ ಸದಸ್ಯರು ಮೊದಲಾದವರಿದ್ದರು.

RELATED ARTICLES
- Advertisment -
Google search engine

Most Popular