Wednesday, February 19, 2025
Homeಧಾರ್ಮಿಕನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ರಜತ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ರಜತ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ

ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ರಜತ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಜನವರಿ 18ರಂದು ಶನಿವಾರ
ಮಧ್ಯಾಹ್ನ 03-00 ಗಂಟೆಗೆ ಸರಿಯಾಗಿ ಕಾರ್ಕಳ ಕಟೀಲು ಇಂಟರ್‌ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ
ನಡೆಯಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಅಬ್ಬನಡ್ಕ – ನಂದಳಿಕೆ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷರಾದ ದಿನೇಶ್ ಪೂಜಾರಿ, ಬೀರೊಟ್ಟು ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಕರ್ನಾಟಕ ಸರಕಾರದ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತರು, ಅಂತರಾಷ್ಟ್ರೀ ಯ ಕ್ರೀಡಾಪಟು ಮತ್ತು ಚಲನಚಿತ್ರ ನಟ ರೋಹಿತ್ ಕುಮಾರ್, ಕಟೀಲು ಅವರು ರಜತ ಸಂಭ್ರಮದ ಆಮಂತ್ರಣ ಪತ್ರಿಕೆ
ಬಿಡುಗಡೆಗೊಳಿಸಲಿದ್ದಾರೆ.
ಸಮಾರಂಭದಲ್ಲಿ ಕಾರ್ಕಳ ಆಕಾರ್ ಆರ್ಕಿಟೆಕ್ಸ್ನ ಮಾಲಕರಾದ ಪ್ರಮಲ್ ಕುಮಾರ್, ಉದ್ಯಮಿಗಳಾದ ಪ್ರಶಾಂತ್ ಕಾಮತ್, ಭಾರತೀಯ ಜೇಸಿಐನ ಪೂರ್ವ ನಿರ್ದೇಶಕರಾದ ಜಾನ್ ಆರ್. ಡಿಸಿಲ್ವ, ಕಾರ್ಕಳ ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಅವಿನಾಶ್ ಜೆ. ಶೆಟ್ಟಿ, ಹೆಬ್ರಿ ಅಮೃತ ಭಾರತಿ ವಿದ್ಯಾ ಸಂಸ್ಥೆಯ ಉಪನ್ಯಾಸಕರಾದ ವೀಣೇಶ್ ಅಮೀನ್ ಸಾಂತೂರು, ಉದ್ಯಮಿಗಳಾದ ಸುಧಾಕರ್ ಪೂಜಾರಿ ಕಾರ್ಕಳ,
ಸಮಾಜ ಸೇವಕಿ ಕಾರ್ಕಳ ರಮಿತಾ ಶೈಲೇಂದ್ರ, ಉದ್ಯಮಿಗಳಾದ ಕಾರ್ಕಳ ಸಮದ್ ಖಾನ್, ಸ್ವಯಂ ಟೈಮ್ ನ್ಯೂಸ್ ಹಾಗೂ ಮಾಧ್ಯಮಬಿಂಬ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ವಸಂತ್ ಕುಮಾರ್,
ನ್ಯೂಸ್ ಕಾರ್ಕಳ ವ್ಯವಸ್ಥಾಪಕ ನಿರ್ದೇಶಕರಾದ ರಾಮಚಂದ್ರ ಬರೆಪ್ಪಾಡಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಬ್ಬನಡ್ಕ – ನಂದಳಿಕೆ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಸಂಚಾಲಕರಾದ ಸಂದೀಪ್ ವಿ. ಪೂಜಾರಿ, ಅಬ್ಬನಡ್ಕ ಕಾರ್ಯಕ್ರಮ ನಿರೂಪಿಸಲಿದ್ದಾರೆ ಎಂದು ಪತ್ರಿಕಾ
ಪ್ರಕಟಣೆಗೆ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular