Friday, March 21, 2025
Homeಬಂಟ್ವಾಳನಾರಾಯಣಗುರುಗಳು ಧಾರ್ಮಿಕ ತಳಹದಿಯಲ್ಲಿ ಸಮಾಜಿಕ ಸುಧಾರಣೆ ಸಾಧ್ಯವಾಗಿಸಿದರು : ದಿನೇಶ್ ಸುವರ್ಣ ರಾಯಿ

ನಾರಾಯಣಗುರುಗಳು ಧಾರ್ಮಿಕ ತಳಹದಿಯಲ್ಲಿ ಸಮಾಜಿಕ ಸುಧಾರಣೆ ಸಾಧ್ಯವಾಗಿಸಿದರು : ದಿನೇಶ್ ಸುವರ್ಣ ರಾಯಿ

ಸಿದ್ದಕಟ್ಟೆ : ಧಾರ್ಮಿಕ ತಳಹದಿಯಲ್ಲಿ ಸಾಮಾಜಿಕ ಸುಧಾರಣೆ ಸಾಧ್ಯವೆಂಬುದು ಗುರುಗಳ ಬಲವಾದ ನಂಬಿಕೆಯಾಗಿತ್ತು.

ಇದರ ಜೊತೆಗೆ ಧಾರ್ಮಿಕ ಮತ್ತು ಆಧ್ಯಾತ್ಮಿಕವಾಗಿ ಶೋಷಣೆಗೊಳಗಾದ ಜನರಿಗೆ ದೇವಸ್ಥಾನಗಳಿಗೆ ಮುಕ್ತ ಪ್ರವೇಶ ದೊರಕಿಸುವ ಉದ್ದೇಶ ಹಾಗೂ ತನ್ಮೂಲಕ ಅವರನ್ನು ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಚಿಂತನೆಯತ್ತ ಹೆಜ್ಜೆ ಹಾಕಿಸುವ ಉದ್ದೇಶವೂ ಗುರುಗಳದಾಗಿತ್ತು. ಮಹತ್ತರವಾದ ಈ ಉದ್ದೇಶಗಳ ಪರಿಣಾಮವೋ ಎಂಬಂತೆ, ಕೇರಳ, ಕರ್ನಾಟಕ, ತಮಿಳುನಾಡು ಸೇರಿದಂತೆ ಸುಮಾರು 79 ದೇವಸ್ಥಾನಗಳನ್ನು ನಿರ್ಮಾಣ ಮಾಡಿಸಿ ಪ್ರತಿಷ್ಠಾಪನೆ ಮಾಡಿದರು.

ಇದರಲ್ಲಿ 41 ದೇವಸ್ಥಾನಗಳಲ್ಲಿ ಗುರುಗಳೇ ಸ್ವತಃ ಮೂರ್ತಿ ಪ್ರತಿಷ್ಠಾಪನೆಗಳನ್ನು ಮಾಡಿದರು. ಉಳಿದಂತೆ ತಮ್ಮ ಶಿಷ್ಯರ ಮೂಲಕ ಮಾಡಿಸಿದರು. ಎಂದು ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ತಿಳಿಸಿದರು.ಅವರು ಬಂಟ್ವಾಳ ಯುವವಾಹಿನಿ ಘಟಕದ ಸದಸ್ಯರಾದ ಮಲ್ಲಿಕಾ ಸುರೇಶ್ ಕರ್ಪೆ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ 33 ನೇ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಪ್ರಥಮ ಉಪಾಧ್ಯಕ್ಷರಾದ ನಾರಾಯಣ ಪಲ್ಲಿಕಂಡ,ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಉದಯ್ ಮೆನಾಡ್, ಮಾಜಿ ಅಧ್ಯಕ್ಷರಾದ ನಾಗೇಶ್ ಪೊನ್ನೋಡಿ, ಪ್ರೇಮನಾಥ್ ಕೆ, ರಾಜೇಶ್ ಸುವರ್ಣ, ಅರುಣ್ ಕುಮಾರ್, ಶಿವಾನಂದ ಎಂ, ಸದಸ್ಯರಾದ ಪ್ರಶಾಂತ್ ಏರಮಲೆ, ಭವಾನಿ ಅಮೀನ್ , ಯತೀಶ್ ಬೊಳ್ಳಾಯಿ, ಆಶಿಶ್ ಪೂಜಾರಿ, ಯೋಗೀಶ್ ಕರ್ಪೆ, ಸದಾನಂದ ಪೂಜಾರಿ ಕರ್ಪೆ, ಸುದೀಪ್ ಸಾಲ್ಯಾನ್ ರಾಯಿ, ಜಗನ್ನಾಥ್ ಸುವರ್ಣ ಕಲ್ಲಡ್ಕ,ಮತ್ತಿತರರು ಉಪಸ್ಥಿತರಿದ್ದರು. ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾದ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು.

RELATED ARTICLES
- Advertisment -
Google search engine

Most Popular