ಬೆಂಗಳೂರು: ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘದ ವತಿಯಿಂದ ಸೆ.29ರಂದು ಬೆಂಗಳೂರಿನ ಟೌನ್ ಹಾಲ್‌ನಲ್ಲಿ ನಾರಾಯಣಗುರು ಜಯಂತ್ಯೋತ್ಸವದ ಪ್ರಯುಕ್ತ ಪರಿವರ್ತನಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಶ್ರೀ ನಾರಾಯಣಗುರು ಮಹಿಳಾ ಸಮಾವೇಶವೂ ನಡೆಯಲಿವೆ. ವಿವಿಧ ಜಿಲ್ಲೆಗಳಿಂದ ಬೆಂಗಳೂರು ನಗರಕ್ಕೆ ಕೆಲಸದ ನಿಮಿತ್ತ ಆಗಮಿಸುವ ಮಹಿಳೆಯರಿಗೆ ಭದ್ರತೆ ನೀಡಲು ಸಮಾಜದ ದಾನಿಗಳ ನೆರವಿನೊಂದಿಗೆ ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ಯೋಜನೆಗೆ ಚಾಲನೆ ನೀಡಲಾಗುತ್ತದೆ. ಸಮಾಜದ ಸಬಲೀಕರಣಕ್ಕಾಗಿ ಆಚಾರದ ಶರಣೆ ಅಕ್ಕಮ್ಮ ಟ್ರಸ್ಟ್‌ಗೆ ಚಾಲನೆಯೂ ದೊರೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.