Tuesday, January 14, 2025
Homeಬಂಟ್ವಾಳ" ಜಗತ್ತಿನ ಅಜ್ಞಾನದ ಕತ್ತಲೆಯನ್ನು ದೂರ ಮಾಡಲು ಉಷಾಕಿರಣವಾಗಿ ಮೂಡಿ ಬಂದವರು ನಾರಾಯಣ ಗುರುಗಳು "-...

” ಜಗತ್ತಿನ ಅಜ್ಞಾನದ ಕತ್ತಲೆಯನ್ನು ದೂರ ಮಾಡಲು ಉಷಾಕಿರಣವಾಗಿ ಮೂಡಿ ಬಂದವರು ನಾರಾಯಣ ಗುರುಗಳು “- ದಿನೇಶ್ ಸುವರ್ಣ ರಾಯಿ

ಬಂಟ್ವಾಳ : ಜಗತ್ತಿನ ಅಜ್ಞಾನದ ಕತ್ತಲೆಯನ್ನು ದೂರ ಮಾಡಲು ಉಷಾಕಿರಣವಾಗಿ ಮೂಡಿ ಬಂದವರು ನಾರಾಯಣ ಗುರುಗಳು ಎಂದು ಬಂಟ್ವಾಳ ಯುವವಾಹಿನಿ ಘಟಕದ ಅಧ್ಯಕ್ಷರಾದ ದಿನೇಶ್ ರಾಯಿ ಹೇಳಿದರು.
ಅವರು ಯುವವಾಹಿನಿ (ರಿ.) ಮಾಣಿ ಘಟಕ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಮಾಣಿ ಇದರ ಜಂಟಿ ಆಶ್ರಯದಲ್ಲಿ ದಿನಕರ್ ಪೂಜಾರಿ ಬೊಳ್ಳುಕಳ್ಳುರವರ ಮನೆಯಲ್ಲಿ ಜರುಗಿದ “ಮನೆ ಮನೆಗೆ ಗುರು ಸಂದೇಶ ಸಂಪನ್ನ” ಕಾರ್ಯಕ್ರಮದಲ್ಲಿ ಗುರು ಸಂದೇಶವನ್ನು ನೀಡಿ ಮಾತನಾಡಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಬ್ರಹ್ಮಶ್ರೀ ಸೇವಾ ಸಂಘ ಮಾಣಿ ಇದರ ಅಧ್ಯಕ್ಷರಾದ ಸುರೇಶ್ ಸೂರ್ಯ ನೆರವೇರಿಸಿ ಶುಭ ಹಾರೈಸಿದರು.

ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷರಾದ ನಾಗೇಶ್ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಉಪಾಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ ಅಧ್ಯಕ್ಷರಾದ ನಿವೃತ್ತ ಸೈನಿಕ ವಿದ್ಯಾಧರ್ ಪೂಜಾರಿ, ಯುವ ವಾಹಿನಿ (ರಿ.) ಮಾಣಿ ಘಟಕದ ಗೌರವ ಸಲಹೆಗಾರರದ ನಾರಾಯಣ್ ಸಾಲಿಯಾನ್, ನಾರಾಯಣ ಗುರು ತತ್ವ ನಿರ್ದೇಶಕರಾದ ನಾರಾಯಣ್ ಮುರುವ, ಸಂಚಾಲಕರಾದ ಸತೀಶ್ ಕೊಪ್ಪರಿಗೆ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಮಾಣಿ ಘಟಕ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಮಾಣಿ ಇದರ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರುಗಳು, ಭಾಗವಹಿಸಿದ್ದರು.
ಸೃಜನ ಮಿತ್ತೂರು ಪ್ರಾರ್ಥಿಸಿ, ಪುಷ್ಪಶ್ರೀ ನಾಗೇಶ್ ಸ್ವಾಗತಿಸಿ, ಸಚಿನ್ ಹಾಗೂ ಪ್ರಜ್ಞ ಕಾರ್ಯಕ್ರಮ ನಿರೂಪಿಸಿದರು.

RELATED ARTICLES
- Advertisment -
Google search engine

Most Popular