ಗುರುತತ್ವವಾಹಿನಿ 28 ನೇ ಮಾಲಿಕೆ
ಬಂಟ್ವಾಳ : ಮಾನವ ಏಕತೆಗಾಗಿಯೂ ದೀನದಲಿತರ ಏಳಿಗೆಗಾಗಿಯೂ ಅನವರತ ಚಿಂತನೆಯೊಂದಿಗೆ ವೇದೋಪನಿಷತ್ತುಗಳ ಆಳವಾದ ಅಧ್ಯಯನ ಮತ್ತು ತಪಸ್ಸಿನ ಫಲವನ್ನು ವಿನಿಯೋಗಿಸಿ, ತನ್ನ ನೆಲದ ನಡೆ ನೇರ ನುಡಿಯ ಕಾಯಕದಿಂದ ಜೀವಿತ ಕಾಲದಲ್ಲೇ ಅಪೂರ್ವ ಫಲಿತಾಂಶದ ಬೆಳಕನ್ನು ಜಗತ್ತಿಗೆ ಇತ್ತವರು ನಾರಾಯಣ ಗುರುಗಳು ಎಂದು ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ಪ್ರೇಮನಾಥ್ ಕೆ ತಿಳಿಸಿದರು
ಅವರು ದಿನಾಂಕ 12.01.2025ರಂದು
ಯುವವಾಹಿನಿ ಬಂಟ್ಟಾಳ ಘಟಕದ ಸದಸ್ಯರಾದ ಸುನಿಲ್ ಸುವರ್ಣ ಮರ್ದೊಳಿ ಇವರ ಮನೆಯಲ್ಲಿ ಜರುಗಿದ ಗುರುತತ್ವವಾಹಿನಿ ಮಾಲಿಕೆ 28 ರಲ್ಲಿ ಗುರುಸಂದೇಶ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ, ಆರೋಗ್ಯ ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಮಾಜಿ ಅಧ್ಯಕ್ಷರಾದ ನಾಗೇಶ್ ಪೊನ್ನೋಡಿ, ಪ್ರೇಮನಾಥ್ ಕೆ, ಶಿವಾನಂದ ಎಂ, ಅರುಣ್ ಕುಮಾರ್, ರಾಜೇಶ್ ಸುವರ್ಣ, ಹರೀಶ್ ಎಸ್ ಕೋಟ್ಯಾನ್ ,ಸದಸ್ಯರಾದ ಹರೀಶ್ ಅಜೆಕಲಾ , ವಿಘ್ನೇಶ್ ಬೊಳ್ಳಾಯಿ, ಯತೀಶ್ ಬೊಳ್ಳಾಯಿ, ಪ್ರಶಾಂತ್ ಏರಮಲೆ, ಯಶೋಧರ ಕಡಂಬಲ್ಕೆ, ಯೋಗೀಶ್ ಕಲ್ಲಡ್ಕ,ಸುಲತಾ ಬಿ.ಸಿರೋಡ್ , ಅರ್ಜುನ್ ಅರಳ ಮತ್ತಿತರರು ಉಪಸ್ಥಿತರಿದ್ದರು.
ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಏರಮಲೆ ಸ್ವಾಗತಿಸಿ ವಂದಿಸಿದರು.