Friday, March 21, 2025
Homeಬಂಟ್ವಾಳನಾರಾಯಣಗುರುಗಳ ಮಾನವ ಸೇವೆ ಸೀಮಾತೀತವಾದದ್ದು: ಬೇಬಿ ಕುಂದರ್

ನಾರಾಯಣಗುರುಗಳ ಮಾನವ ಸೇವೆ ಸೀಮಾತೀತವಾದದ್ದು: ಬೇಬಿ ಕುಂದರ್

ಗುರುತತ್ವವಾಹಿನಿ 32 ನೇ ಮಾಲಿಕೆ

ಬಂಟ್ವಾಳ : ಬ್ರಹ್ಮಶ್ರೀ ನಾರಾಯಣ ಗುರುಗಳು ಜೀವನದುದ್ದಕ್ಕೂ ಮಾಡಿದ ಪವಿತ್ರ, ಕಳಂಕರಹಿತ ಮಾನವ ಸೇವೆ ಸೀಮಾತೀತವಾದದ್ದು. ಅದ್ಭುತವಾದದ್ದು. ವರ್ತಮಾನ ಕಾಲದಲ್ಲಿ ಇಷ್ಟೊಂದು ಪ್ರೀತ್ಯಾದಾರ, ಗೌರವಗಳ ಉತ್ತುಂಗ ಏರಿದವರು ಇನ್ನೊಬ್ಬರಿಲ್ಲ. ಇವರು ಮಾತುಗಾರರಲ್ಲ. ಮಾತುಗಳು ಅತ್ಯಲ್ಪ. ತನ್ನ ಉಪಸ್ಥಿತಿಯ ಸಾನಿಧ್ಯ ಪ್ರಭಾವದಿಂದಲೇ ಸರ್ವತ್ರ ಪ್ರೇಮ ಕಿರಣಗಳನ್ನು ಬಿತ್ತರಿಸಿದರು. ನಾರಾಯಣಗುರುಗಳ ಸಂದೇಶಗಳನ್ನು ಅನುಷ್ಠಾನ ಮಾಡುತ್ತಿರುವ ಯುವವಾಹಿನಿ ಸಂಸ್ಥೆಯ ಕಾರ್ಯ ಇತರರಿಗೆ ಮಾದರಿ ಎಂದು ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ತಿಳಿಸಿದರು.

ಅವರು ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಬಂಟ್ಟಾಳ ತಾಲೂಕು ಪಿಡಬ್ಲ್ಯೂಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ರವರ ಮನೆಯಲ್ಲಿ ಜರುಗಿದ ಗುರುತತ್ವವಾಹಿನಿ ಮಾಲಿಕೆ 32 ರಲ್ಲಿ ಗುರು ಸಂದೇಶ ನೀಡಿಮಾತನಾಡಿ, ಗುರುತತ್ವವಾಹಿನಿ ಕಾರ್ಯಕ್ರಮವನ್ನು ಇನ್ನಷ್ಟು ಉತ್ತಮ ಗೊಳಿಸಲು ತನ್ನ ವತಿಯಿಂದ ಉಚಿತವಾಗಿ ಹಾರ್ಮೋನಿಯಂ ಸೆಟ್ಟನ್ನು ನೀಡುವುದಾಗಿ ತಿಳಿಸಿದರು.

ಯುವವಾಹಿನಿಯ ಶಿಸ್ತು ಯುವಜನತೆಗೆ ಪ್ರೇರಣೆ : ಯಶವಂತ ದೇರಾಜೆ

ಕ್ರಿಯಾಶೀಲ ಯೋಜನೆ ಯೋಚನೆಯ ಮೂಲಕ ಯುವವಾಹಿನಿಯ ಶಿಸ್ತುಬದ್ಧ ಕಾರ್ಯಗಳು ಮಾದರಿಯಾಗಿದೆ. ಎಂದು ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಯಶವಂತ ದೇರಾಜೆ ತಿಳಿಸಿದರು.

ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಉಪಾಧ್ಯಕ್ಷರಾದ ನಾರಾಯಣ ಪಲ್ಲಿಕಂಡ, ಕೋಶಾಧಿಕಾರಿ ಗೀತಾ ಜಗದೀಶ್, ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಉದಯ್ ಮೆನಾಡ್, ಶೃಜನಿ ಬೊಳ್ಳಾಯಿ ಮಧುಸೂದನ್ ಮಧ್ವ, ಕಿರಣ್‌ರಾಜ್ ಪೂಂಜರೆಕೋಡಿ, ಮಾಜಿ ಅಧ್ಯಕ್ಷರಾದ ನಾಗೇಶ್ ಪೊನ್ನೋಡಿ, ಪ್ರೇಮನಾಥ್ ಕೆ, ರಾಜೇಶ್ ಸುವರ್ಣ, ಅರುಣ್ ಕುಮಾರ್, ಸದಸ್ಯರಾದ, ಪ್ರಶಾಂತ್ ಏರಮಲೆ, ನಾಗೇಶ್ ಪೂಜಾರಿ ಏಲಬೆ, ಹರೀಶ್ ಸಾಲ್ಯಾನ್ ಅಜೆಕಲ, ಸುಲತಾ ಸಾಲ್ಯಾನ್, ಭವಾನಿ ಅಮೀನ್ , ಯತೀಶ್ ಬೊಳ್ಳಾಯಿ, ಶೈಲಜಾ ರಾಜೇಶ್, ಚಿನ್ನಾ ಕಲ್ಲಡ್ಕ, ಅಶ್ವಿನ್ ಬೊಳ್ಳಾಯಿ, ಯಶೋಧರ ಕಡಂಬಳಿಕೆ, ಸುನಿತಾ ನಿತಿನ್,ಆಶಿಶ್ ಪೂಜಾರಿ ವಾಮದಪದವು, ನವೀನ್ ಕಾರಾಜೆ, ಮತ್ತಿತರರು ಉಪಸ್ಥಿತರಿದ್ದರು.

ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾದ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು.

RELATED ARTICLES
- Advertisment -
Google search engine

Most Popular