Monday, July 15, 2024
Homeಶಿಕ್ಷಣಎಕ್ಸಲೆಂಟ್‌ನಲ್ಲಿರಾಷ್ಟ್ರೀಯ ವೈದ್ಯರ ದಿನಾಚರಣೆ

ಎಕ್ಸಲೆಂಟ್‌ನಲ್ಲಿರಾಷ್ಟ್ರೀಯ ವೈದ್ಯರ ದಿನಾಚರಣೆ


ವಿದ್ಯಾರ್ಜನೆಯಲ್ಲಿ ಶ್ರದ್ಧೆಯು ಎಷ್ಟು ಮುಖ್ಯವೋ ವೈದ್ಯ ವೃತ್ತಿಯಲ್ಲಿ ಕಾರ್ಯತತ್ಪರತೆಯು ಅಷ್ಟೇ ಮುಖ್ಯ. ನೀವು ಮಾಡುವ ಕೆಲಸದಲ್ಲಿ ಗೌರವವಿರಲಿ ಇಂತಹ ಕಾರ್ಯಗಳ ಮೂಲಕ ನಿಮ್ಮಲ್ಲಿರುವ ವೈದ್ಯರಾಗುವ ಕನಸುಗಳು ಇನ್ನಷ್ಟು ಚಿಗುರೊಡೆಯಲಿ ಎಂದುಕೊಡಗಿನ ಕುಶಾಲನಗರದ ವೈದ್ಯೆ ಡಾ|| ಸುಚಿತ್ರಾಎಕ್ಸಲೆಂಟ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಚರಿಸಿದ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಮುಖ್ಯಅತಿಥಿಯಾಗಿ ಹೇಳಿದರು.
ವೈದ್ಯ ವೃತ್ತಿಯು ಅತ್ಯಂತ ಶ್ರೇಷ್ಠ ವೃತ್ತಿಯಾಗಿದೆ.ಉತ್ತಮ ವೈದ್ಯನೊಬ್ಬನಿಗೆ ಹಣ ಗಳಿಸುವುದೇ ಮುಖ್ಯವಲ್ಲ. ರೋಗಿಯಜೀವ ಉಳಿಸುವುದು ಮುಖ್ಯಎಂದುಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್ ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್, ಉಪ ಮುಖ್ಯೋಪಾಧ್ಯಾಯ ಜಯಶೀಲ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಮನಸ್ವಿರಾಣಿ ಕಾರ್ಯಕ್ರಮವನ್ನು ನಿರೂಪಿಸಿದರು. ಪವನ್‌ಕುಮಾರ್ ವಂದಿಸಿದರು.

RELATED ARTICLES
- Advertisment -
Google search engine

Most Popular