ಬೆಳ್ತಂಗಡಿ : ಎ ಕೆ ಫ್ ಎ ಕರಾಟೆ ಅಸೋಸಿಯೇಷನ್ ಭಟ್ಕಳದಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಕೂಟದಲ್ಲಿ ಶೊರೀನ್ ರಿಯೂ ಉಜಿರೆ ಹಾಗೂ ಬೆಳ್ತಂಗಡಿ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.
ಕುಮಿತೆ ವಿಭಾಗದಲ್ಲಿ ಪ್ರಮಿತ್ ಕೆ. ಇವರು ಚಿನ್ನದ ಪದಕವನ್ನು ಪಡೆದಿರುತ್ತಾರೆ. ಹಾಗೆಯೇ ಬ್ಲೇಕ್ ಬೆಲ್ಟ್ ವಿಭಾಗದಲ್ಲಿ ಹಾಗೂ ಕಟ ವಿಭಾಗದಲ್ಲಿ ಪ್ರಮಿತ್ ಚಿನ್ನದ ಪದಕ ಪಡೆದು ಬೆಳ್ತoಗಡಿ ತಾಲೂಕಿಗೆ ಕೀರ್ತಿಯನ್ನು ತಂದಿರುತ್ತಾರೆ. ಇವರಿಗೆ ತರಬೇತಿಯನ್ನು ಶಿಹನ್ ಅಬ್ದುಲ್ ರಹಿಮಾನ್ ಹಾಗೂ ಸೆನ್ಸಯಿ ರಿಜ್ವಾನ್ ನೀಡಿರುತ್ತಾರೆ. ಇವರಿಗೆ ಶೋರೀನ್ ರಿಯೊ ಕರಾಟೆ ಅಸೋಸಿಯೇಷನ್ ಆಫ್ ಇಂಡಿಯಾ ಇದರ ವತಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ.