ಮುಲ್ಕಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್,ಭಾರತ ಸರಕಾರ
ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ರೋಟರಿ ಕ್ಲಬ್ ಬೈಕಂಪಾಡಿ, ಗ್ರಾಮ ಪಂಚಾಯತ್ ಪಡುಪಣಂಬೂರು ಇವರ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಅಂಗವಾಗಿ ತೋಕೂರು ಸುಬ್ರಹ್ಮಣ್ಯ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಹಣ್ಣು ಹಂಪಲು ವಿತರಣೆಯನ್ನು ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ವತಿಯಿಂದ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಲಯನ್ ಶಿವಪ್ರಸಾದ್, ಕಾರ್ಯದರ್ಶಿ ಪ್ರತಿಭಾ ಹೆಬ್ಬಾರ್, ಖಜಾಂಚಿ ಅನಿಲ್ ಕುಮಾರ್, ಪ್ರಾಂತ್ಯ11 ಪ್ರಾಂತ್ಯ ಅಧ್ಯಕ್ಷರಾದ ವೆಂಕಟೇಶ್ ಹೆಬ್ಬಾರ್, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಪಣಂಬೂರು ಕಾರ್ಯದರ್ಶಿ ಕುಮಾರಿ ಸುಜಾತ
ಅತಿಥಿಯಾಗಿ ಫೇಮಸ್ ಯೂತ್ ಕ್ಲಬ್ ಕಾರ್ಯದರ್ಶಿ ಹಿಮಕರ ಕೋಟ್ಯಾನ್, ಅಂಗನವಾಡಿ ಕಾರ್ಯಕರ್ತೆ ಪ್ರೇಮಲತಾ
ಅಂಗನವಾಡಿ ಕಾರ್ಯಕರ್ತೆ ಸಹಾಯಕಿ ವಿಶಾಂತಿ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.