ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮುನಿಯಾಲು, ಇಲ್ಲಿ ದಿನಾಂಕ 08-03-2025 ರಂದು ಮಹಿಳಾ ಘಟಕದ ವತಿಯಿಂದ ರಾಷ್ಟೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಂಚೆ ಕಚೇರಿ ಮುನಿಯಾಲಿನ ಪೋಸ್ಟ್ ಮಾಸ್ಟರ್ ಆಶಾ ಪ್ರಕಾಶ್ ಕೊಟಿಯಾನ್ ರವರು ಮಾತೆ ಸಾವಿತ್ರಿ ಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ, ಮಹಿಳೆಯರ ಸಾಧನೆ ಮತ್ತು ತ್ಯಾಗದ ಬಗ್ಗೆ ಮಾತನಾಡಿ ಐತಿಹಾಸಿಕವಾಗಿ ಅವರ ಪಾತ್ರ ಮತ್ತು ಕೊಡುಗೆಗಳ ಬಗ್ಗೆ ತಿಳಿಸಿಕೊಟ್ಟದ್ದಲ್ಲದೆ, ಮಹಿಳೆಯರ ಶಿಕ್ಷಣದ ಮಹತ್ವ ಮತ್ತು ಸ್ವಾವಲಂಭನೆ ಬಗ್ಗೆ ಮುಂದಿನ ಪೀಳಿಗೆಯವರಿಗೆ ಸ್ಪೂರ್ತಿ ತುಂಬಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಕೆ.ಜಿ. ಸುಧಾಕರ್ ರವರು ʼಸಂವಿಧಾನದ ಅಡಿಪಾಯವೇ ಮಾತೃ ಮಮತೆಯ ಸಮಾನತೆ ಮೇಲೆ ನಿಂತಿದೆ ಎಂದು ತಿಳಿಸುತ್ತಾ ಮಹಿಳೆಯರು ಪ್ರಗತಿ ಹೊಂದಿದರಷ್ಟೆ ಸಮಾಜದ ಏಳಿಗೆ ಸಾಧ್ಯʼ ಎಂದು ಹೇಳಿದರು. ತೃತಿಯ ಬಿಕಾಂ. ವಿದ್ಯಾರ್ಥಿನಿಯಾದ ಕು. ಗಾಯತ್ರಿರವರು ಸಮಾರಂಭದಲ್ಲಿ ಉಪಸ್ಥಿತರಿದ್ದ ಎಲ್ಲರನ್ನೂ ಸ್ವಾಗತಿಸಿದರು. ವಾಣಿಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಹಾಗೂ ಮಹಿಳಾ ಘಟಕದ ಸಂಚಾಲಕರಾದ ಕು. ಬಿಂದು. ಎ ರವರು ಪ್ರಾಸ್ತವಿಕ ನುಡಿಗಳ್ನಾಡಿದರು. ತೃತಿಯ ಬಿ.ಎ. ವಿದ್ಯಾರ್ಥಿನಿಯಾದ ಕು. ಯೋಗಿತ ರವರು ಸಮಾರಂಭದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ವಂದನೆಗಳನ್ನು ಅರ್ಪಿಸಿದರು. ಕಾಲೇಜಿನ ಪ್ರಥಮ ಬಿ.ಕಾಂ. ವಿದ್ಯಾರ್ಥಿನಿಯಾದ ಕು. ಕಾವ್ಯಶ್ರೀ ರವರು ಕಾರ್ಯಕ್ರಮವನ್ನು ನಿರುಪಣೆ ಮಾಡಿದರು. ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ವಗ೯ದವರು ಮತ್ತು ವಿದ್ಯಾಥಿ೯-ವಿದ್ಯಾಥಿ೯ನಿಯರು ಉಪಸ್ಥಿತರಿದ್ದರು.