ಮಂಗಳೂರು: ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ ನಿಧನರಾಗಿದ್ದಾರೆ. ಮಂಗಳೂರು ಮೂಲದ ರಘುನಂದನ್ ಮೇ 17ರಂದು ಮುಂಬಯಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತ ರಘುನಂದನ್ ಅವರಿಗೆ 70 ವವರ್ಷ ವಯಸ್ಸಾಗಿತ್ತು.
1954ರಲ್ಲಿ ಮೂಲ್ಕಿಯ ಬಡ ಕುಟುಂಬವೊಂದರಲ್ಲಲಿ ಜನಿಸಿದ್ದ ಕಾಮತ್ ಅವರ ತಂದೆ ಹಣ್ಣಿನ ವ್ಯಾಪಾರಿಯಾಗಿದ್ದರು. 14ನೇ ವಯಸ್ಸಿಗೆ ಮುಂಬಯಿಗೆ ತೆರಳಿದ್ದ ಕಾಮತ್ ಅಣ್ಣನ ಹೋಟೆಲಿನಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿದ್ದರು. ಬಳಿಕ 1984ರಲ್ಲಿ ಕಾಮತ್ ತಮ್ಮ ಮೊದಲ ನ್ಯಾಚುರಲ್ ಐಸ್ ಕ್ರೀಂ ಮುಂಬಯಿಯ ಜುಹುನಲ್ಲಿ ಆರಂಭಿಸಿದರು. ಅದು ಇದೀಗ ದೇಶಾದ್ಯಂತ ಜನಪ್ರಿಯ ಐಸ್ ಕ್ರೀಂ ಆಗಿ ಬೆಳೆದು ಇದೀಗ ದೊಡ್ಡ ಉದ್ಯಮವಾಗಿದೆ್.
ಕೇವಲ 4 ಮಂದಿ ಸಿಬ್ಬಂದಿಯೊಂದಿಗೆ ಆರಂಭವಾದ ಐಸ್ ಕ್ರೀಂ ಸಂಸ್ಥೆ ಈಗ 156 ಔಟ್ ಲೆಟ್ ಹೊಂದಿದೆ. ವರ್ಷಕ್ಕೆ 400 ಕೋಟಿ ರೂ. ವ್ಯವಹಾರ ನಡೆಸುತ್ತಿದೆ್.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.