MRPL ಸಂಸ್ಥೆಯ C.S.R ನಿಧಿಯ ಮೂಲಕ ಸಂಸ್ಥೆಯು ಕೊಡುಗೆಯಾಗಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾವೂರಿಗೆ ನೀಡಿದ ಶಾಲಾ ಕಟ್ಟಡದ ಶಿಲಾನ್ಯಾಸವನ್ನು,ಶಾಲೆಗೆ ಯೋಜನೆ ಜಾರಿಯಾಗಲು ವಿಶೇಷ ಮುತುವರ್ಜಿ ವಹಿಸಿದ, ಬಂಟ್ಟಾಳ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಇವರು ನೆರವೇರಿಸಿದರು.
ಈ ಸಂಧರ್ಭದಲ್ಲಿ ನಾವೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಂದಿರಾ ಕಣಪಾದೆ, ಸದಸ್ಯರಾದ ವಿಜಯ ನಾವೂರು,ಜನಾರ್ದನ ಕೊಂಬೆಟ್ಟು, ತ್ರಿವೇಣಿ, ಮಾಜಿ ಸದ್ಯಸರಾದ ಸದಾನಂದ ಹಳೆಗೇಟು,ಹಾಗೂ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಸತೀಶ್ ಮಲೆಕೋಡಿ ಪದವು,ಹಾಗೂ ಸದಸ್ಯರು,
ಹಿರಿಯ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾದ ಪ್ರೆಸಿಲ್ಲಾ ಡಿಸೋಜ, ಹಾಗೂ ಸಹ ಶಿಕ್ಷಕರು, ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಅರ್ಚನಾ ಸಿ.ಪಿ.,ಹಾಗೂ ಸಹಶಿಕ್ಷಕರು, ಮಾಯಾ ಕಂಟ್ರಕ್ಷನ್ ನ ಮಾಲಕರಾದ ಕಾರ್ತಿಕ್ ಶೆಟ್ಟಿ ವಿಟ್ಲ, ಯೋಜನೆಗೆ ಸತತ ಪ್ರಯತ್ನ ಪಟ್ಟ ಮಾತೃಭೂಮಿ ಸೇವಾ ಸಂಘ ನಾವೂರು ಇದರ ಅಧ್ಯಕ್ಷರಾದ ಸಂತೋಷ್ ಕೋಟ್ಯಾನ್ ಎಕ್ಕುಡೇಲು ,ನಿರ್ದೇಶಕರಾದ ಸುರೇಶ್. ಎಸ್.ನಾವೂರು ಸಂಘಟಕರಾದ ಹರೀಶ್ ಕೆಲ್ಲೆರ್ ಮಾರ್ ಅಕ್ಷಯ್ ಮೈಂದಾಳ ಹಾಗೂ ಸದಸ್ಯರು, ಸಮಾಜಿಕ ಮುಂದಾಳು ಜೋಸೆಫ್ .ವಿ.ಡಿ.ಪಾಂಗೋಡಿ. ಇವರು ಉಪಸ್ಥಿತರಿದ್ದರು.