ಮಂಗಳೂರು: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸೆ. 26ರಿಂದ ಅ. 3ರ ವರೆಗೆ ನವರಾತ್ರಿ ಮಹೋತ್ಸವ ಜರಗಲಿದೆ. ಪ್ರತೀದಿನ ಮಧ್ಯಾಹ್ನ ಭಕ್ತರಿಂದ ಹರಕೆಯ ಚಂಡಿಕಾ ಹೋಮ ಮತ್ತು ರಾತ್ರಿ 8ಕ್ಕೆ ನವರಾತ್ರಿ ಪೂಜೆ ನಡೆಯಲಿದೆ. ಅ. 3ರಂದು ಮಹಾನವಮಿ ಪ್ರಯುಕ್ತ ದೇಗುಲದ ವತಿಯಿಂದ ಚಂಡಿಕಾ ಹೋಮ ನಡೆಯಲಿದೆ. ಪ್ರತೀ ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.

ಸೆ. 30ರ ಲಲಿತಾ ಪಂಚಮಿಯಂದು ಬೆಳಗ್ಗೆ 9ರಿಂದ 12ರ ವರೆಗೆ ಶ್ರೀ ದೇವರಿಗೆ ಹರಕೆಯಾಗಿ ಬಂದ ಸೀರೆಯನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Leave a Reply

Your email address will not be published.