Sunday, July 21, 2024
Homeರಾಜ್ಯ2005ರ ಪೊಲೀಸ್‌ ಹತ್ಯಾಕಾಂಡದ ಆರೋಪಿ ನಕ್ಸಲ್‌ ಚಂದ್ರು ಬಂಧನ

2005ರ ಪೊಲೀಸ್‌ ಹತ್ಯಾಕಾಂಡದ ಆರೋಪಿ ನಕ್ಸಲ್‌ ಚಂದ್ರು ಬಂಧನ

ತುಮಕೂರು: ಪಾವಗಡದ ವೆಂಕಟಮ್ಮನಹಳ್ಳಿಯಲ್ಲಿ 2005ರಲ್ಲಿ ನಡೆದಿದ್ದ ಪೊಲೀಸ್‌ ಹತ್ಯಾಕಾಂಡದಲ್ಲಿ ಭಾಗಿಯಾಗಿ 9 ವರ್ಷದಿಂದ ತಲೆ ಮರೆಸಿಕೊಂಡಿದ್ದ ನಕ್ಸಲ್‌ ಕೋಮುಲು ಮುತ್ಯಾಲ ಚಂದ್ರುನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಿಬಿಎಂಪಿಯಲ್ಲಿ ಪೌರಕಾರ್ಮಿಕನಾಗಿ ದುಡಿಯುತ್ತಿದ್ದ ಈತನನ್ನು ಬಂಧಿಸಿ ಪಾವಗಡದ ಜೆಎಂಎಫ್‌ಸಿ ಕೋರ್ಟ್‌ಗೆ ಹಾಜರುಪಡಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.


ಬಂಧಿತ ಆರೋಗಿ ಆಂಧ್ರಪ್ರದೇಶದ ಗಾರಲದಿನ್ನೆ ಕೇಶವಪುರದ ನಿವಾಸಿ ಎನ್ನಲಾಗಿದೆ. 2005ರ ಫೆ.11ರಂದು ರಾತ್ರಿ 10.30ರ ಸುಮಾರಿಗೆ ಏಕಾಏಕಿ ಸುಮಾರು 300 ಮಂದಿ ಪೊಲೀಸ್‌ ಕ್ಯಾಂಪ್‌ ಮೇಲೆ ದಾಳಿ ನಡೆಸಿದ್ದರು. ದಾಳಿಯಲ್ಲಿ ಏಳು ಪೊಲೀಸರು ಮತ್ತು ಒಬ್ಬ ಬಸ್ಸು ಕ್ಲೀನರ್‌ ಮೃತಪಟ್ಟಿದ್ದರು. ಪ್ರಕರಣದ ಬಳಿಕ ಚಂದ್ರು ತಲೆ ಮರೆಸಿಕೊಂಡಿದ್ದ.

RELATED ARTICLES
- Advertisment -
Google search engine

Most Popular