ನೀರುಡೆ ಸಾರ್ವಜನಿಕ ಶ್ರೀ ಗಣೇಶೋತ್ಸವವು ಈಸಾರಿ ರಜತ ಮಹೋತ್ಸವದ ಸಂಭ್ರಮದಲ್ಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜುಲೈ 27 2024 ರಂದು ಸಂಜೆ 6.00 ಗಂಟೆಗೆ ನೀರುಡೆ ಶ್ರೀ ಗಣೇಶೋತ್ಸವ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷರಾದ ಹರಿಪ್ರಕಾಶ್ ನೆಲ್ಲಿ ತೀರ್ಥ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಶ್ರೀ ವಿಘ್ನೇಶ್ವರ ದೇವರನ್ನು ಪ್ರಾರ್ಥಿಸಿ, ದೀಪ ಬೆಳಗುವುದರ ಮುಖೇನ ಕಾರ್ಯಕ್ರಮ ಚಾಲನೆಗೊಂಡು, ಸಮಿತಿಯ ಗೌರವಾಧ್ಯಕ್ಷರು ಬಿ ವಿದ್ಯಾಧರ ಹೆಗ್ಡೆಯವರು, ಉಪಸ್ಥಿತರಿದ್ದು ಎಲ್ಲರೊಡನೆ ಬೆರೆತು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಸಮಿತಿಯ ಸಂಚಾರಕರು ಲ. ಮುಕ್ತಾನಂದ ಶೆಟ್ರು, ಶಾಮ ಶೆಟ್ಟಿ ಎಕ್ಕಾರು, ಲ. ದಯಾನಂದ ಉಮಲೊಟ್ಟು ಹಾಗೂ ನವೀಕೃತ ಕಟ್ಟೆ, ಮೇಲ್ಚಾವಣಿ, ಬ್ಲಾಕ್ ಅಳವಡಿಕೆಯ ಉಸ್ತುವಾರಿಗಳಾದ ಲ. ರಾಯನ್ ರೋಷನ್ ಡಿಸೋಜ ಶಲೋಮ್, ಲ. ಅಶೋಕ್ ನಾಯ್ಕ್, ಶ್ರೀನಿವಾಸ ಟೈಲರ್, ಮಿಥುನ್ ಬಳ್ಳಾಲ್ ಬೈಲು, ಸುವಿತ್ ನೀರುಡೆ, ಶರತ್, ಲೋಕೇಶ್, ತಾರನಾಥ ಎಕ್ಕಾರು ಸೀತಾರಾಮ್ ರೈ ಉಪಸ್ಥಿತರಿದ್ದರು. ಲ. ಮುರಳಿ ದಾಸ್ ಕೆ ಕಾರ್ಯಕ್ರಮ ನಿರೂಪಿಸಿದರು ಹಾಗೂ ಧನ್ಯವಾದ ಸಮರ್ಪಣೆ ಮಾಡಿದರು.