Monday, January 13, 2025
Homeಮೂಡುಬಿದಿರೆಅಧಿಕಾರಿಗಳ ನಿರ್ಲಕ್ಷ್ಯ : ತೀವ್ರ ಹದಗೆಟ್ಟ ಬೆಳ್ಮಣ್-ಮೂಡುಬಿದಿರೆ ಸಂಪರ್ಕ ರಸ್ತೆ

ಅಧಿಕಾರಿಗಳ ನಿರ್ಲಕ್ಷ್ಯ : ತೀವ್ರ ಹದಗೆಟ್ಟ ಬೆಳ್ಮಣ್-ಮೂಡುಬಿದಿರೆ ಸಂಪರ್ಕ ರಸ್ತೆ

ಮೂಡಬಿದಿರೆ: ಬೆಳ್ಮಣ್ ಮತ್ತು ಮೂಡುಬಿದಿರೆ ಸಂಪರ್ಕ ರಸ್ತೆಯು ತೀವ್ರ ಹದಗೆಟ್ಟಿದ್ದು ಪುತ್ತಿಗೆ ಪಟ್ಲ ರಸ್ತೆಯ ಪಕ್ಕದಲ್ಲಿ ಭಾಗಶಃ ಹೋಂಡಾ ಬಿದ್ದು ಹದಗೆಟ್ಟಿದ್ದು ಪ್ರಯಾಣಿಕರು ಪರದಾಡುವಂತಾಗಿದೆ. ಒಂದು ವಾರದ ಹಿಂದೆ ಇದೆ ಹೋಂಡಾಕ್ಕೆ ಒಂದು ಕಾರು ಬಿದ್ದು ವಿದ್ಯುತ್ ಕಂಬ ತುಂಡಾಗಿ ಬಿದ್ದಿತ್ತು , ಆದರೆ ದುರಸ್ತಿ ಮಾಡಲು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದಾಗಿ ಸಾರ್ವಜನಿಕರು ದೂರಿದ್ದಾರೆ.

ನಮ್ನ ಪ್ರತಿನಿಧಿ ಪುತ್ತಿಗೆ ಪಿ.ಡಿ.ಒ ಭೀಮ ನಾಯ್ಕ ಅವರನ್ನು ಸಂಪರ್ಕಿಸಿ ನಿಮ್ಮ ಗಮನಕ್ಕೆ ಈ ವಿಷಯ ಬಂದಿದೆಯೆ? ಎಂದು ಕೇಳಿದಾಗ ನನಗೆ ಗೊತ್ತಿಲ್ಲ. ಆದರೆ ನಾನು ಸಂಬಂಧ ಪಟ್ಟವರಿಗೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular