
ನಿಟ್ಟೆ: ಜನವರಿ 28 ರಿಂದ ಫೆಬ್ರವರಿ 5 ರ ವರೆಗೆ ನಡೆಯುವ ವೈಭವದ ನೆಲ್ಲಿ ಬ್ರಹ್ಮಕಲಶೋತ್ಸವಕ್ಕೆ ಚಪ್ಪರ ಮುಹೂರ್ತ ಕಾರ್ಯಕ್ರಮ 22 ಶುಕ್ರವಾರ ಪೂರ್ವಾಹ್ನ ಕ್ಷೇತ್ರದಲ್ಲಿ ನಡೆಯಿತು. ಅಂತರಾಷ್ಟ್ರೀಯ ಕ್ರೀಡಾಪಟು ಶ್ರೀ ರೋಹಿತ್ ಕುಮಾರ್ ಕಟೀಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಆಶೀರ್ವಾದ ಪಡೆದರು. ಕ್ಷೇತ್ರದ ತಂತ್ರಿಗಳಾದ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ವೈದಿಕ ಕಾರ್ಯಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲ ಆಡಳಿತ ಮೋಕ್ತೇಸರರಾದ ಸುನಿಲ್ ಕೆ ಆರ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಚೇತನ್ ನಾಯಕ್, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಮಹಾಬಲ ಸುವರ್ಣ, ಪ್ರಧಾನ ಕಾರ್ಯದರ್ಶಿ ಸುಮಿತ್ ಕೌಡೂರು ಆಡಳಿತ ಮಂಡಳಿ ಸದಸ್ಯರಾದ ಸುಧೀರ್ ನಿಟ್ಟೆ, ರಂಜಿತ್ ಅಮೀನ್ ಹಾಗೂ ಕ್ಷೇತ್ರದ ಭಕ್ತಾದಿಗಳು ಮತ್ತು ಮಹಿಳಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.