Wednesday, February 19, 2025
Homeಮೂಡುಬಿದಿರೆನೆಲ್ಲಿಕಾರು ಗ್ರಾಮ ಪಂಚಾಯತ್ ಮಹಿಳಾ ಗ್ರಾಮ ಸಭೆ

ನೆಲ್ಲಿಕಾರು ಗ್ರಾಮ ಪಂಚಾಯತ್ ಮಹಿಳಾ ಗ್ರಾಮ ಸಭೆ

ಮೂಡುಬಿದಿರೆ ತಾಲೂಕಿನ ನೆಲ್ಲಿಕಾರು ಗ್ರಾಮದ ಸಮಗ್ರ ಸಹಭಾಗಿ ವಾರ್ಷಿಕ ಕ್ರಿಯಾ ಯೋಜನೆ, ಗ್ರಾಮ ಪಂಚಾಯತ್ ದೂರ ದೃಷ್ಟಿ ಯೋಜನೆ ಹಾಗೂ ಮಹಿಳಾ ಗ್ರಾಮ ಸಭೆ ಜನವರಿ 28ರಂದು ಪಂಚಾಯತ್ ಹಳೆ ಕಟ್ಟಡದಲ್ಲಿ ನಡೆಯಿತು. ಸಭೆಯನ್ನು ಉದ್ದೇಶಿಸಿ ಆರೋಗ್ಯ ಕೇಂದ್ರದ ಉಷಾ ಆಯುಷ್ಮಾನ್ ಕಾರ್ಡ್ ಪಡೆದು ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬೇಕೆಂದು ಕೇಳಿಕೊಂಡರು. ಅಂಗನವಾಡಿ ಮೇಲ್ವಿಚಾರಕಿ ಕಾತ್ಯಾಯಿನಿ ಯವರು ಗರ್ಭಿಣಿ ಹಾಗೂ ಬಾಣಂತಿಯರ ನೋಂದಣಿ, ಪೋಶಣ್ ಅಭಿಯಾನ, 25 ವರ್ಷಗಳಿಂದ ನಡೆಯುತ್ತಿರುವ ಸ್ತ್ರೀಶಕ್ತಿ ಗುಂಪುಗಳ ಕಾರ್ಯ, ಉದ್ಯೋಗಿನಿ ಯೋಜನೆ, ಮಹಿಳಾ ಅಭಿವೃದ್ಧಿ ನಿಗಮದಿಂದ ಸಿಗುವ ವಿವಿಧ ಸೌಲಭ್ಯಗಳು, ಮಹಿಳಾ ಕಿರುಕುಳ ತಡೆಗಾಗಿ ಇರುವ ಸಖಿ ಒನ್ ಸ್ಟಾಪ್ ಯೋಜನೆ, ಇತ್ಯಾದಿಗಳ ವಿವರವನ್ನು ತಿಳಿಸಿ ರಾಜಕೀಯವಾಗಿ ಮಹಿಳೆಯರು ಅಭಿವೃದ್ಧಿ ಹೊಂದಿ ಅಧಿಕಾರವನ್ನು ಚಲಾಯಿಸಲು ಪ್ರಯತ್ನಿಸಬೇಕೆಂದು ಕೇಳಿಕೊಂಡರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪಂಚಾಯತ್ ಸದಸ್ಯ ಶಶಿಧರ್ ಸಂಜೀವಿನಿ, ಸ್ತ್ರೀಶಕ್ತಿ ಗುಂಪುಗಳು ಬಲಗೊಂಡು ಗ್ರಾಮದಲ್ಲಿ ತಪ್ಪುಗಳಾದಾಗ ದನಿಯತ್ತಿ ಸರಿಪಡಿಸಲು ನಮ್ಮನ್ನು ಉಪಯೋಗಿಸಿಕೊಳ್ಳಬೇಕೆಂದು ಆಶಿಸಿದರು. ಮಹಿಳಾ ಆರೋಗ್ಯ ತಪಾಸಣೆಗಾಗಿ ಸರಕಾರದಿಂದ ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ದೇವಕಿ, ಉಪಾಧ್ಯಕ್ಷೆ ಸುಶೀಲ, ಆಶಾಲತಾ, ಸಂತೋಷ ವ್ಯಕ್ತಪಡಿಸಿದರು. ಗ್ರಾಮ ಪಂಚಾಯತ್ನ ಹೆಚ್ಚಿನ ಎಲ್ಲ ಸದಸ್ಯರು ವೇದಿಕೆಯಲ್ಲಿ ಹಾಜರಿದ್ದರು. ಅಧ್ಯಕ್ಷತೆ ವಹಿಸಿದ್ದ ಪಂಚಾಯತ್ನ ಅಧ್ಯಕ್ಷ ಉದಯ ಪೂಜಾರಿ ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿಯೂ ಉಪಾಧ್ಯಕ್ಷನಾಗಿ ಆಯ್ಕೆಗೊಂಡ ಸಂತಸವನ್ನು ಹಂಚಿಕೊಂಡು ಯಾವುದೇ ಕೆಲಸಕ್ಕೂ ಕೂಡ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದೆಂದು ಸಭೆಗೆ ಭರವಸೆ ನೀಡಿದರು. ಆದಷ್ಟು ಬೇಗ ರಸ್ತೆ ಸಮರ್ಪಕಗೊಳಿಸುವಂತಹ ಪ್ರಯತ್ನ ಮಾಡುವುದಾಗಿಯೂ ತಿಳಿಸಿದರು. ಗ್ರಾಮ ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

RELATED ARTICLES
- Advertisment -
Google search engine

Most Popular