Thursday, April 24, 2025
Homeಬೆಂಗಳೂರುನೆಸ್ಲೆ ಇಂಡಿಯಾ ಹೊಸ ಮಂಚ್ ಚೋಕೊ ಫಿಲ್ಸ್ನೊಂದಿಗೆ ತನ್ನ ಧಾನ್ಯಗಳ ಉಪಹಾರ ಪೋರ್ಟ್‌ಫೋಲಿಯೊವನ್ನು ವಿಸ್ತರಿಸಿದೆ

ನೆಸ್ಲೆ ಇಂಡಿಯಾ ಹೊಸ ಮಂಚ್ ಚೋಕೊ ಫಿಲ್ಸ್ನೊಂದಿಗೆ ತನ್ನ ಧಾನ್ಯಗಳ ಉಪಹಾರ ಪೋರ್ಟ್‌ಫೋಲಿಯೊವನ್ನು ವಿಸ್ತರಿಸಿದೆ

ಬೆಂಗಳೂರು: ನೆಸ್ಲೆ ಇಂಡಿಯಾ ತನ್ನ ಹೊಸ ಧಾನ್ಯಗಳ ಉಪಹಾರ ವಿಭಾಗದಲ್ಲಿ ಮಂಚ್ ಚೋಕೊ ಫಿಲ್ಸ್ ಅನ್ನು ಸಂಭ್ರಮದೊಂದಿಗೆ ಬಿಡುಗಡೆ ಮಾಡಿದೆ. ಇದು ಈಗ ಭಾರತದಾದ್ಯಂತ ಲಭ್ಯವಿದೆ. ಈ ಧಾನ್ಯದ ತಿನಿಸಿನ ಗರಿಗರಿ ಹೊರ ಪದರ ಮತ್ತು ಒಳಗಿನ ಚಾಕೊಲೇಟ್ ಫಿಲ್ಲಿಂಗ್‌ ಒಂದು ಅನುಪಮ ಆಹ್ಲಾದಕರ ಮಿಶ್ರವಾಗಿದ್ದು ಒಂದು ರೋಮಾಂಚಕ ಉಪಹಾರವಾಗಲಿದೆ. ಬೆಳಗಿನ ಉಪಾಹಾರ ಒಳ್ಳೆಯದಾಗಿರಬೇಕೆಂದು ಬಯಸುವವರಿಗೆ ಸೂಕ್ತವಾಗಿದೆ.

ಸಮೃದ್ಧ ಹಾಲಿನ ಚಾಕೊಲೇಟ್ ಫಿಲ್ಲಿಂಗ್‌ ಸಹಿತವಾಗಿರುವ ನೆಸ್ಲೆ ಮಂಚ್ ಚೋಕೊ ಫಿಲ್ಸ್ ನ ಪ್ರತಿ ತುಣುಕೂ ಆನಂದದಾಯಕವಾಗಿರುತ್ತದೆ.  ಈ ಚೋಕೊ ಫಿಲ್ಸ್ ನಿಜಕ್ಕೂ ಹೊರಗೆ ಗರಿಗರಿಒಳಗೆ ಬೆಣ್ಣೆಯಂತೆ.

 ಹೊಸ ಉತ್ಪನ್ನದ ಬಿಡುಗಡೆಯ ಕುರಿತು ಮಾತನಾಡಿದ ನೆಸ್ಲೆ ಇಂಡಿಯಾದ ಬ್ರೇಕ್‌ಫಾಸ್ಟ್ ಸಿರಿಯಲ್ಸ್‌ ನಿರ್ದೇಶಕ ಶ್ರೀ ವರುಣ್ ಸೇತುರಾಮನ್, “ನೆಸ್ಲೆ, ಭಾರತದಾದ್ಯಂತ ಉಪಾಹಾರಕ್ಕೆ ಉತ್ಸಾಹ ಮತ್ತು ಹೊಸತನ ತರಲು ಸದಾ ಶ್ರಮಿಸುತ್ತದೆ. ಮಂಚ್ ಚೋಕೊ ಫಿಲ್ಸ್, ತಮ್ಮ ಬೆಳಗು ಆನಂದದಿಂದ ಇರಬೇಕೆಂದರೆ ರುಚಿಕರವಾದ ಮತ್ತು ಹೊಸಬಗೆಯ ಉಪಾಹಾರ ಬಹಳ ಮುಖ್ಯ ಎನ್ನುವ ಗ್ರಾಹಕರಿಗಾಗಿ ಹೇಳಿ ಮಾಡಿಸಿದಂತಿದೆ. ನಮ್ಮ ಗ್ರಾಹಕರಿಗಾಗಿ  ನಮ್ಮ ಈಗಿರುವ ಮಂಚ್ ಸಿರಿಯಲ್ ಪೋರ್ಟ್‌ಫೋಲಿಯೊಗೆ ಮಂಚ್ ಚೋಕೊ ಫಿಲ್ಸ್ ಅನ್ನು ಸೇರಿಸಲು ನಮಗೆ ಬಹಳ ಸಂತೋಷವಾಗುತ್ತಿದೆ.”

ನೆಸ್ಲೆ ಮಂಚ್ ಚೋಕೊ ಫಿಲ್ಸ್, ಪ್ರಮುಖ ಚಿಲ್ಲರೆ ಅಂಗಡಿಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ಈ ಹೊಸ ಸೇರ್ಪಡೆಯ ಮೂಲಕ ನೆಸ್ಲೆ, ಭಾರತೀಯರ ಅಭಿರುಚಿ, ರುಚಿಗಳಿಗೆ ಹೊಂದುವಂತಹ ವೈವಿಧ್ಯಮಯ ಉಪಹಾರ ಪರಿಹಾರಗಳನ್ನು ನೀಡುವ ತನ್ನ ನಿರಂತರ ಪ್ರಯಾಣವನ್ನು ಮುಂದುವರೆಸಿದೆ.

RELATED ARTICLES
- Advertisment -
Google search engine

Most Popular