Thursday, May 1, 2025
HomeಬೆಂಗಳೂರುKITKAT® ಪ್ರೊಫೆಶನಲ್ ಸ್ಪ್ರೆಡ್ ಅನಾವರಣಗೊಳಿಸಿದ ನೆಸ್ಲೆ ಇಂಡಿಯಾ(Nestlé India): ಅಡುಗೆ ತಯಾರಿಗಳಿಗೆ ಒಂದು ವಿನೂತನ ಸೇರ್ಪಡೆ

KITKAT® ಪ್ರೊಫೆಶನಲ್ ಸ್ಪ್ರೆಡ್ ಅನಾವರಣಗೊಳಿಸಿದ ನೆಸ್ಲೆ ಇಂಡಿಯಾ(Nestlé India): ಅಡುಗೆ ತಯಾರಿಗಳಿಗೆ ಒಂದು ವಿನೂತನ ಸೇರ್ಪಡೆ

ಬೆಂಗಳೂರು : ತನ್ನ ಮನೆಯಾಚೆಗಿನ ಆವಿಷ್ಕಾರಗಳ ಮೇಲೆ ನಿರ್ಮಾಣ ಮಾಡುತ್ತಾ, ನೆಸ್ಲೆ ಪ್ರೊಫೆಶನಲ್ ಈಗ KITKAT® Professional Spreadನ ಪರಿಚಯದೊಂದಿಗೆ ಕೋಕೋ-ಆಧಾರಿತ ಸ್ಪ್ರೆಡ್ಸ್ ವರ್ಗಕ್ಕೆ ಕಾಲಿರಿಸ್ದೆ. ಈ ಸ್ಪ್ರೆಡ್, HoReCa (ಹೋಟೇಲುಗಳು, ರೆಸ್ಟಾರೆಂಟ್‌ಗಳು ಮತ್ತು ಕೇಟರಿಂಗ್) ವರ್ಗಕ್ಕೆ KITKAT® ಅನುಭವವನ್ನು ವಿಸ್ತರಿಸುತ್ತದೆ.

ಸದಾ ಬದಲಾಗುತ್ತಿರುವ ಇಂದಿನ ಗ್ರಾಹಕರ ಸಂದರ್ಭದಲ್ಲಿ, ಚೆಫ್‌ಗಳು ವಿಶಿಷ್ಟವಾದ ಹಾಗೂ ಭೋಗೀಯ ಸಿಹಿತಿನಿಸು ಕೊಡುಗೆಗಳನ್ನು ಸೃಷ್ಟಿಸಲು ನಿರಂತರವಾಗಿ ಆವಿಷ್ಕಾರ ಮಾಡುತ್ತಲೇ ಇದ್ದಾರೆ, ತನ್ನ ಸಮೃದ್ಧವಾದ ಚಾಕೊಲೇಟ್ ರುಚಿ ಮತ್ತು ಗರಿಗರಿಯಾದ ಟೆಕ್ಸ್‌ಚ್‌ನೊಂದಿಗೆ KITKAT® ಪ್ರೊಫೆಶನಲ್ ಸ್ಪ್ರೆಡ್, ವೈವಿಧ್ಯಮಯವಾದ ಬಿಸಿ ಮತ್ತು ತಂಪು ಅಪ್ಲಿಕೇಶನ್‌ಗಳೊಳಗೆ ಅನಾಯಾಸವಾಗಿ ಹೊಂದಿಕೊಳ್ಳುವಂತಹ ಕ್ರಿಯಾಶೀಲವಾದ ಹಾಗೂ ಬಳಸಲು ಸಿದ್ಧವಾದ ಪರಿಹಾರವಾಗಿದೆ. ಕಲಾಕೃತಿಯಂತಹ ಪೇಸ್ಟ್ರಿಗಳಿಂದ ಹಿಡಿದು ತತ್ಕಾಲೀನ ಪ್ಲೇಟ್ ಮೇಲಿಡುವ ಸಿಹಿತಿನಿಸುಗಳವರೆಗೆ, ಈ ಸ್ಪ್ರೆಡ್‌ಅನ್ನು, ಟಾಪಿಂಗ್ಸ್, ಫಿಲ್ಲಿಂಗ್ ಅಥವಾ ಅಲಂಕರಣವಾಗಿ ಬಳಸಬಹುದಾಗಿದೆ ಮತ್ತು ಇದು ಕೇಕ್‌ಗಳು, ಕುಕೀಸ್, ಪೇಸ್ಟ್ರೀಸ್ ಮತ್ತು ಪಾನೀಯಗಳು ಒಳಗೊಂಡಂತೆ, ವೈವಿಧ್ಯಮಯವಾದ ರಚನೆಗಳಿಗೆ KITKAT® ವೇಫ್‌ನ ಅನುಭವವನ್ನು ತರುತ್ತದೆ.

KITKAT® ಪ್ರೊಫೆಶನಲ್ ಸ್ಪ್ರೆಡ್‌ನ ಪರಿಚಯದ ಬಗ್ಗೆ ಮಾತನಾಡುತ್ತಾ, ನೆಸ್ಲೆ ಇಂಡಿಯಾದ ನೆಸ್ಲೆ ಪ್ರೊಫೆಶನಲ್ ವಿಭಾಗದ ನಿರ್ದೇಶಕ ಸೌರಭ್ ಮಖೀಜ, “KITKAT® , ಭಾರತದ ಅತ್ಯಂತ ನೆಚ್ಚಿನ ಬ್ರ್ಯಾಂಡ್‌ಗಳ ಪೈಕಿ ಒಂದಾಗಿ ಉಳಿದುಕೊಂಡು ಬಂದಿದೆ. KITKAT ಪ್ರೊಫೆಶನಲ್ ಸ್ಪ್ರೆಡ್‌ನ ಪರಿಚಯವು, ರಚನೆಗಳಿಗೆ ಅದರ ಸಿಗ್ನೇಚರ್ ರುಚಿ ಮತ್ತು ಟೆಕ್‌ಚರ್ ಅಳವಡಿಸಿಕೊಳ್ಳಲು ಚೆಫ್‌ಗಳಿಗೆ ಹೊಸ ವಿಧಾನಗಳನ್ನು ತೋರಿಸಿಕೊಡುತ್ತದೆ. ಈ ಆವಿಷ್ಕಾರವು, ಅಡುಗೆ ತಯಾರಿಯ ಸೃಜನಶೀಲತೆಗೆ ನಮ್ಮ ಬದ್ಧತೆಯನ್ನು ಪ್ರದರ್ಶಿಸುವುದರ ಜೊತೆಗೆ, HoReCa ಮತ್ತು ಸಾಂಸ್ಥಿಕ ವರ್ಗಗಳಿಗಾಗಿ ವೈವಿಧ್ಯಮಯವಾದ ಪರಿಹಾರ ಒದಗಿಸುವ ಸಮಯದಲ್ಲೇ ಗ್ರಾಹಕ ಅನುಭವವನ್ನೂ ವರ್ಧಿಸುತ್ತದೆ.” ಎಂದರು.

ನವದೆಹಲಿಯಲ್ಲಿ ಮಾರ್ಚ್ 4ರಿಂದ 8ರವರೆಗೆ ನಡೆದ ಭಾರತದ ಅಂತರರಾಷ್ಟ್ರೀಯ ಆಹಾರ ಮತ್ತು ಆತಿಥ್ಯ ಮೇಳವಾದ AAHARದಲ್ಲಿ ಈ ಉತ್ಪನ್ನವನ್ನು ಪೂರ್ವವೀಕ್ಷಣೆ ಮಾಡಲಾಯಿತು. ಪರಿಚಯದ ಭಾಗವಾಗಿ ನೆಸ್ಲೆ, ಪರಸ್ಪರ ಸಂವಾದದ ಬೂತ್‌ಗಳನ್ನು ಸ್ಥಾಪಿಸಿ, ವಿವಿಧ ಸಿಹಿತಿನಿಸು ಅಪ್ಲಿಕೇಶನ್‌ಗಳಾದ್ಯಂತ ಉತ್ಪನ್ನದ ವೈವಿಧ್ಯತೆಯನ್ನು ಪ್ರದರ್ಶಿಸಲು, ಪ್ರತ್ಯಕ್ಷ ರುಚಿ ನೋಡುವಿಕೆ ಅಧಿವೇಶನಗಳು ಮತ್ತು ಪ್ರದರ್ಶನವನ್ನು ಒದಗಿಸಿತ್ತು. ಚೆಫ್‌ಗಳು ಮತ್ತು ಉದ್ದಿಮೆ ವೃತ್ತಿಪರರು, ವಿವಿಧ ಅಡುಗೆತಯಾರಿ ತಿನಿಸುಗಳಲ್ಲಿ ಈ ಸ್ಪ್ರೆಡ್ ಯಾವ ರೀತಿ ಸ್ವಾದ ಮತ್ತು ಟೆಕ್ಸ್‌ಚರ್ ಹೆಚ್ಚಿಸುತ್ತದೆ ಎಂಬುದನ್ನು ಪ್ರತ್ಯಕ್ಷವಾಗಿ ಅನುಭವಿಸುವ ಅವಕಾಶ ಪಡೆದುಕೊಂಡಿದ್ದರು.

KITKAT ಪ್ರೊಫೆಶನಲ್ ಸ್ಪ್ರೆಡ್, ಮನೆಯಾಚೆಗಿನ ಮಾರುಕಟ್ಟೆಯ ಅವಶ್ಯಕತೆಗಳನ್ನು ಪೂರೈಸುವುದಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಅನುಕೂಲಕರ 1kg ಪ್ಯಾಕ್‌ನಲ್ಲಿ ಲಭ್ಯವಿರುತ್ತದೆ.

RELATED ARTICLES
- Advertisment -
Google search engine

Most Popular