Saturday, February 15, 2025
Homeಹೆಬ್ರಿನಿವೇಶನ ಕಡತಗಳು ಜಟಿಲ ಸಂಸದ ಕೋಟ ಆಕ್ರೋಶತಳಮಟ್ಟದ ಸಂಘಟನೆ ಪಕ್ಷಕ್ಕೆ ಬಲ ತುಂಬಲಿದೆ ವಿ ಸುನಿಲ್...

ನಿವೇಶನ ಕಡತಗಳು ಜಟಿಲ ಸಂಸದ ಕೋಟ ಆಕ್ರೋಶತಳಮಟ್ಟದ ಸಂಘಟನೆ ಪಕ್ಷಕ್ಕೆ ಬಲ ತುಂಬಲಿದೆ ವಿ ಸುನಿಲ್ ಕುಮಾರ್

ಹೆಬ್ರಿ :ಕಂದಾಯ ಇಲಾಖೆಯಿಂದ 9/11 ಸೇರಿದಂತೆ ನಿವೇಶನಗಳಿಗೆ ಸಂಬಂಧಿಸಿದ ಇತರ ದಾಖಲೆಗಳನ್ನು ಪಡೆಯುವಲ್ಲಿ ಸಾರ್ವಜನಿಕರಿಗೆ ತೀರಾ ಕಷ್ಟಕರವಾದ ಪರಿಸ್ಥಿತಿಯಲ್ಲಿದ್ದು ಸರ್ಕಾರ ಜನರ ಭಾವನೆಗಳ ಜತೆ ಚೆಲ್ಲಾಟವಾಡುತ್ತಿದೆ. ಬಡವರಿಗೆ ಗ್ರಾಮ ಪಂಚಾಯತ್‌ ಮೂಲಕ ಹಂಚಿಕೆಯಾಗಬೇಕಿದ್ದು ಮನೆ ನಿವೇಶನಗಳು ಮತ್ತು ಮನೆ ಕಟ್ಟಡ ನಿರ್ಮಾಣಕ್ಕೆ ಬೇಕಾದ ಅನುದಾನವನ್ನು ತಡೆಹಿಡಿದಿರುವ ಕಾಂಗ್ರೆಸ್‌ ಸರ್ಕಾರ, ಖಾಸಗಿಯಾಗಿ ಖರೀದಿ ಮಾಡಿದ ನಿವೇಶನಗಳಲ್ಲಿ ಕೂಡ ಮನೆ ನಿರ್ಮಾಣ ಮಾಡದ ಪರಿಸ್ಥಿತಿಯನ್ನು ತಂದೊಡ್ಡಿದೆ. ಗ್ಯಾರೆಂಟಿಗಳ ಪ್ರಚಾರದೊಂದಿಗೆ ಬಡವರಿಗೆ ಮಂಕುಬೂದಿ ಎರಚಿ ಸರ್ಕಾರ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಕಾರ್ಕಳ ತಾಲೂಕಿನ ಸಾರ್ವಜನಿಕರು 9/11 ಕಡತ ಪ್ರಕ್ರಿಯೆಗಾಗಿ ಹತ್ತಾರು ಬಾರಿ ಕಾಪು ತಾಲೂಕಿಗೆ ಅಲೆದಾಡುವ ಪರಿಸ್ಥಿತಿ ಇದೆ. ಜನರ ಈ ಸಮಸ್ಯೆಗಳಿಗೆ, ಆತಂಕಗಳಿಗೆ ಧ್ವನಿಯಾಗಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಹೆಬ್ರಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ, ಸಂಸದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರದ ಶಾಸಕರಾದ ವಿ ಸುನಿಲ್‌ ಕುಮಾರ್‌ ನೂತನ ಬೂತ್‌ ಸಮಿತಿ, ಗ್ರಾಮ ಸಮಿತಿ ಮತ್ತು ಮಹಾಶಕ್ತಿಕೇಂದ್ರಗಳಿಗೆ ಬಹುತೇಕ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಅಂತಿಮಗೊಂಡಿದ್ದು, ಗ್ರಾಮೀಣ ಭಾಗದಲ್ಲಿ ತಳಮಟ್ಟದಿಂದ ಒಗ್ಗಟ್ಟಿನಿಂದ ಪಕ್ಷದ ಸಂಘಟನೆಯನ್ನು ಬಲಪಡಿಸುವುದರಿಂದ ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬಿದಂತಾಗುತ್ತದೆ. ಕಾರ್ಯಕರ್ತರು ಹೊಸ ಉತ್ಸಾಹದಿಂದ ಪಕ್ಷಕ್ಕೆ ದುಡಿದು, ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸರ್ಕಾರದ ನಿರ್ಲಕ್ಷ್ಯದ ಧೋರಣೆಯಿಂದ ಪಡಿತರ ಚೀಟಿ ಗೊಂದಲ, ಕಟ್ಟಡ ಸಾಮಗ್ರಿಗಳ ಕೊರತೆ, ಬೆಲೆಯೇರಿಕೆ, ಅಭಿವೃದ್ಧಿ ಕುಂಠಿತದಂತಹ ಅನೇಕ ಸಮಸ್ಯೆಗಳಿಂದ ಸಂತೃಸ್ಥರಾದ ಅನೇಕ ಬಡಜನರು ತೊಂದರೆಯಲ್ಲಿದ್ದಾರೆ. ಅವರ ನೆರವಿಗೆ ನಿಂತು ಹೋರಾಟ ಮಾಡಬೇಕಾದ ಅನಿವಾರ್ಯತೆಯನ್ನು ಒತ್ತಿ ಹೇಳಿದರು.

ಹೆಬ್ರಿ ಮಹಾ ಶಕ್ತಿಕೇಂದ್ರದ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ಷೇತ್ರಾಧ್ಯಕ್ಷರಾದ ನವೀನ್‌ ನಾಯಕ್‌, ಪ್ರಧಾನ ಕಾರ್ಯದರ್ಶಿಗಳಾಧ ಸುರೇಶ್‌ ಶೆಟ್ಟಿ ಶಿವಪುರ, ಬೋಳ ಸತೀಶ್‌ ಪೂಜಾರಿ ಹಾಗೂ ಪ್ರಮುಖರಾದ ರವೀಂದ್ರ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಪ್ರಸನ್ನ ಶೆಟ್ಟಿ ಸ್ವಾಗತಿಸಿ ವಂದಿಸಿದರು.

RELATED ARTICLES
- Advertisment -
Google search engine

Most Popular