Tuesday, April 22, 2025
Homeಸುಳ್ಯಪಂಜಿಕಲ್ಲು ಶಾಲಾ ಜಗುಲಿಯಲ್ಲಿ ನವಜಾತ ಶಿಶು ಪತ್ತೆ | ಮಗು ಬಿಟ್ಟು ಪರಾರಿಯಾದ ಹೆತ್ತವರು

ಪಂಜಿಕಲ್ಲು ಶಾಲಾ ಜಗುಲಿಯಲ್ಲಿ ನವಜಾತ ಶಿಶು ಪತ್ತೆ | ಮಗು ಬಿಟ್ಟು ಪರಾರಿಯಾದ ಹೆತ್ತವರು

ಸುಳ್ಯ: ಇಲ್ಲಿನ ಜಾಲ್ಸೂರು ಸಮೀಪದ ಪಂಜಿಕಲ್ಲು ಶಾಲೆಯ ಜಗುಲಿಯಲ್ಲಿ ನವಜಾತ ಶಿಶುವೊಂದನ್ನು ಬಿಟ್ಟು ಹೋದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಶಾಲಾ ಬಳಿಯ ಮನೆಯವರು ಮಗು ಅಳುವುದನ್ನು ಕೇಳಿಸಿಕೊಂಡು ಪರಿಶೀಲಿಸಿದಾಗ ಈ ವಿಷಯ ಗಮನಕ್ಕೆ ಬಂದಿದೆ.
ಬಳಿಕ ವಿಷಯ ಪೊಲೀಸರಿಗೆ ತಿಳಿಸಲಾಯಿತು. ಶಾಲೆ ಅದೂರು ಪೊಲೀಸ್‌ ಠಾಣಾ ವ್ಯಾಪ್ತಿಗೆ ಬರುವುದರಿಂದ ಅದೂರು ಠಾಣೆಯ ಪೊಲೀಸರು ಮಗುವನ್ನು ಠಾಣೆಗೆ ಕರೆದೊಯ್ದಿದ್ದಾರೆ.

RELATED ARTICLES
- Advertisment -
Google search engine

Most Popular