Saturday, July 20, 2024
Homeಮಂಗಳೂರುಸೈಬರ್ ಕ್ರೈಂ | ಹೊಸ ಮಾದರಿಯ ಆನ್ ಲೈನ್ ವಂಚನೆ ಬಗ್ಗೆ ಎಚ್ಚರಿಕೆ; ಎಪಿಕೆ ಫೈಲ್...

ಸೈಬರ್ ಕ್ರೈಂ | ಹೊಸ ಮಾದರಿಯ ಆನ್ ಲೈನ್ ವಂಚನೆ ಬಗ್ಗೆ ಎಚ್ಚರಿಕೆ; ಎಪಿಕೆ ಫೈಲ್ ಕ್ಲಿಕ್ ಮಾಡದಂತೆ ಸೂಚನೆ; ತಪ್ಪಿ ಕ್ಲಿಕ್ ಮಾಡಿದಲ್ಲಿ ಪರಿಹಾರ ಇಲ್ಲಿದೆ!

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪೊಲೀಸ್ ಇಲಾಖೆಗೂ ಸಾರ್ವಜನಿಕರಿಗೂ ಒಂದು ಸವಾಲು. ಇದೀಗ ಹೊಸ ಮಾದರಿಯ ಸೈಬರ್ ಕ್ರೈಂಗಳು ವರದಿಯಾಗುತ್ತಿದ್ದು, ಈ ಬಗ್ಗೆ ಮಂಗಳೂರು ನಗರ ಪೊಲೀಸ್ ನ ಸೆನ್ ಅಪರಾಧ ವಿಭಾಗ ಪ್ರಕಟಣೆಯೊಂದನ್ನು ಹೊರಡಿಸಿದೆ.

ಸೈಬರ್ ವಂಚಕರು ರಿಮೋಟ್ ಅಕ್ಸಸ್ ಟೂಲ್ಸ್ ಬಳಸಿಕೊಂಡು ಎಪಿಕೆ ಫೈಲ್ ಅಥವಾ ಅಂಡ್ರಾಯ್ಡ್ ಆ್ಯಪ್ ಸಿದ್ಧಪಡಿಸಿ ವಾಟ್ಸಾಪ್ ಅಥವಾ ಟೆಕ್ಸ್ಟ್ ಮೆಸೇಜ್ ಮುಖಾಂತರ ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗಳಿಗೆ ಕಳುಹಿಸಿಕೊಡುತ್ತಿದ್ದಾರೆ. ಅದನ್ನು ಓಪನ್ ಮಾಡಿದಲ್ಲಿ ಮೊಬೈಲ್ ಗೆ ಬರುವ ಎಲ್ಲಾ ಟೆಕ್ಸ್ಟ್ ಮೆಸೇಜ್ ಗಳು ವಂಚಕರ ಮೊಬೈಲ್ ಗಳಿಗೆ ಆಟೊಮ್ಯಾಟಿಕಲಿ ಮೆಸೇಜ್ ಫಾರ್ವರ್ಡಿಂಗ್ ಆಗುತ್ತದೆ. ಆ ಮೂಲಕ ಸುಲಭವಾಗಿ ಒಟಿಪಿ ಪಡೆಯುವ ವಂಚಕರು ಸಾರ್ವಜನಿಕರ ಖಾತೆಗಳಿಗೆ ಇಂಟರ್ನೆಟ್ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಅಳವಡಿಸಿಕೊಂಡು ಕ್ಷಣ ಮಾತ್ರದಲ್ಲಿ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇಂತಹ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಇಂತಹ ಸಂದರ್ಭಗಳಲ್ಲಿ ಏನು ಮಾಡಬೇಕು ಎಂಬ ಸಲಹೆಗಳನ್ನೂ ನೀಡಲಾಗಿದೆ.

  1. ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗಳಿಗೆ ವಾಟ್ಸಾಪ್ ಅಥವಾ ಟೆಕ್ಸ್ಟ್ ಮೆಸೇಜ್ ಮುಖಾಂತರ ಬರುವ ಎಪಿಕೆ ಫೈಲ್ ಅಥವಾ ಅಂಡ್ರಾಯ್ಡ್ ಆ್ಯಪ್ ಗಳ ಲಿಂಕ್ ಗಳನ್ನು ಕ್ಲಿಕ್ ಮಾಡಬೇಡಿ.
  2. ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಇನ್ಸ್ಟಾಲ್ ಅನ್ ಕ್ನೋನ್ ಆ್ಯಪ್ಸ್ ಅನ್ನು ಡಿಸೇಬಲ್ ಮಾಡಿ.
  3. ಒಂದು ವೇಳೆ ನಿರ್ಲಕ್ಷದಿಂದ ಅಂತಹ ಲಿಂಕ್ ಗಳನ್ನು ಕ್ಲಿಕ್ ಮಾಡಿದ್ದಲ್ಲಿ ತಕ್ಷಣ ತಮ್ಮ ಮೊಬೈಲ್ ಅನ್ನು ಏರೋಪ್ಲೇನ್ ಮೋಡ್ ಗೆ ಹಾಕಿ ಅಥವಾ ಸ್ವಿಚ್ ಆಫ್ ಮಾಡಿಕೊಂಡು ನಿಮ್ಮ ಬ್ಯಾಂಕ್ ಸಂಪರ್ಕಿಸಿ ನಿಮ್ಮ ಖಾತೆ ಸ್ಥಗಿತಗೊಳಿಸಿ.
  4. ತಮ್ಮ ಖಾತೆಯಿಂದ ಹಣ ವರ್ಗಾವಣೆಗೊಂಡಿದ್ದಲ್ಲಿ ಸೈಬರ್ ಕ್ರೈಂ ಹೆಲ್ಪ್ ಲೈನ್ 1930ಗೆ ಕರೆ ಮಾಡಿ ದೂರು ದಾಖಲಿಸಿ.

ಮುಂತಾದ ಮಹತ್ವದ ಸಲಹೆಗಳನ್ನೂ ಇಲಾಖೆ ನೀಡಿದೆ. ಇದನ್ನು ಪಾಲಿಸಿದಲ್ಲಿ ನಿಮ್ಮ ಖಾತೆಯ ಹಣ ಸುರಕ್ಷಿತವಾಗಿರುವುದು. ಇಲ್ಲವಾದಲ್ಲಿ ಸೈಬರ್ ಕಳ್ಳರು ಕನ್ನ ಹಾಕುವುದು ಗ್ಯಾರಂಟಿ!

RELATED ARTICLES
- Advertisment -
Google search engine

Most Popular