Saturday, June 14, 2025
Homeರಾಜ್ಯಡ್ರೈವಿಂಗ್ ಲೈಸೆನ್ಸ್ ಪಡೆಯಲು ಇನ್ನು ಆರ್ ಟಿಒ ಕಚೇರಿಗೆ ಹೋಗಬೇಕಿಲ್ಲ: ಜೂ. 1ರಿಂದ ಹೊಸ ನಿಯಮ...

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇನ್ನು ಆರ್ ಟಿಒ ಕಚೇರಿಗೆ ಹೋಗಬೇಕಿಲ್ಲ: ಜೂ. 1ರಿಂದ ಹೊಸ ನಿಯಮ ಜಾರಿ

ಬೆಂಗಳೂರು: ಹೊಸ ಚಾಲನಾ ಪರವಾನಗಿಗೆ ಇನ್ಮುಂದೆ ಆರ್ ಟಿ ಒ ಕಚೇರಿಗೆ ಅಲೆದಾಡಬೇಕಾಗಿಲ್ಲ. ಜೂ. 1ರಿಂದ ಹೊಸ ಚಾಲನಾ ಪರವಾನಗಿ ನಿಯಮಗಳು ಜಾರಿಗೆ ಬರಲಿವೆ. ಜೂ.1ರಿಂದ ಚಾಲನಾ ಪರವಾನಗಿಗಾಗಿ ಆರ್ ಟಿಒ ಕಚೇರಿಗಳ ಬದಲು ಖಾಸಗಿ ಚಾಲನಾ ಶಾಲೆಗಳಲ್ಲಿ ಪರವಾನಗಿಗೆ ಅಗತ್ಯ ಪರೀಕ್ಷೆಗಳು ಮತ್ತು ಪ್ರಮಾಣ ಪತ್ರಗಳನ್ನು ನೀಡಲು ಅವಕಾಶ ನೀಡಲಾಗುತ್ತದೆ.

ಹೊಸ ಚಾಲನಾ ಪರವಾನಗಿ ಪಡೆಯುವ ನಿಯಮಗಳನ್ನು ಸರ್ಕಾರ ಸುಲಭಗೊಳಿಸಿದೆ. ಆದರೆ ಚಾಲನಾ ಪರವಾನಗಿ ನೀಡಬಹುದಾದ ಚಾಲನಾ ಶಾಲೆಗಳು ಕನಿಷ್ಠ 1 ಎಕರೆ ಭೂಮಿ ಹೊಂದಿರಬೇಕು. ನಾಲ್ಕು ಚಕ್ರಗಳ ವಾಹನಗಳಿಗೆ ತರಬೇತಿ ನೀಡಿದರೆ ಅವರಿಗೆ 2 ಎಕರೆ ಭೂಮಿ ಬೇಕಾಗುತ್ತದೆ. ಚಾಲನಾ ಶಾಲೆಗಳು ಸರಿಯಾದ ಪರೀಕ್ಷಾ ಸೌಲಭ್ಯಕ್ಕೆ ಪ್ರವೇಶವನ್ನು ಹೊಂದಿರಬೇಕು.

ತರಬೇತುದಾರರು ಹೈಸ್ಕೂಲ್ ಡಿಪ್ಲೊಮಾ ಅಥವಾ ತತ್ಸಮಾನ ಶಿಕ್ಷಣ ಹೊಂದಿರಬೇಕು, ಕನಿಷ್ಠ 5 ವರ್ಷ ಚಾಲನಾ ಅನುಭವ ಮತ್ತು ಬಯೋಮೆಟ್ರಿಕ್ಸ್ ಮತ್ತು ಐಟಿ ವ್ಯವಸ್ಥೆಗಳ ಜ್ಞಾನ ಹೊಂದಿರಬೇಏಕಕು. ಲಘು ಮೋಟಾರು ವಾಹನಗಳಿಗೆ ತರಬೇತಿ 4 ವಾರಗಳಲ್ಲಿ 29 ಗಂಟೆಗಳಾಗಿರಬೇಕು. 8 ಗಂಟೆ ಥಿಯರಿ ಮತ್ತು 21 ಗಂಟೆ ಪ್ರಾಯೋಗಿಕ ತರಬೇತಿ ನೀಡಬೇಕಾಗುತ್ತದೆ.

ಭಾರೀ ಮೋಟಾರು ವಾಹನಗಳಿಗೆ 66 ವಾರಗಳಲ್ಲಿ 38  ಗಂಟೆಗಳ ತರಬೇತಿ ನೀಡಬೇಕು. 8 ಗಂಟೆ ಥಿಯರರಿ ಮತ್ತ್ತು 31 ಗಂಟೆ ಪ್ರಾಯೋಗಿಕ ತರಬೇತಿ ಇರಬೇಕು.

RELATED ARTICLES
- Advertisment -
Google search engine

Most Popular