Saturday, February 15, 2025
Homeರಾಷ್ಟ್ರೀಯಪ್ರಧಾನಿ ಮೋದಿ ಮನೆಗೆ ಬಂದ ಹೊಸ ಅತಿಥಿ | ಮುದ್ದಿನ ʻದೀಪಜ್ಯೋತಿʼಯನ್ನು ಎತ್ತಿ ಮುದ್ದಾಡಿದ ಪ್ರಧಾನಿ

ಪ್ರಧಾನಿ ಮೋದಿ ಮನೆಗೆ ಬಂದ ಹೊಸ ಅತಿಥಿ | ಮುದ್ದಿನ ʻದೀಪಜ್ಯೋತಿʼಯನ್ನು ಎತ್ತಿ ಮುದ್ದಾಡಿದ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ ನಿವಾಸಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಹೊಸ ಕರುವೊಂದನ್ನು ಸಂತಸದಿಂದ ಮೋದಿಯವರು ಪರಿಚಯಿಸಿಕೊಂಡಿದ್ದಾರೆ. ಅಲ್ಲದೆ, ಮುದ್ದಾದ ಈ ಕರುವನ್ನು ಎತ್ತಿಕೊಂಡು ಮುದ್ದಾಡಿ, ಮುತ್ತಿಟ್ಟಿದ್ದಾರೆ. ಪ್ರಧಾನಿ ನಿವಾಸದ ಈ ಕ್ಯೂಟ್​​ ಅತಿಥಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಪ್ರಧಾನಿ ಮೋದಿಯವರಿಗೆ ಮಕ್ಕಳೆಂದರೆ ಮಾತ್ರವಲ್ಲ, ಪ್ರಾಣಿಗಳ ಮೇಲೂ ವಿಶೇಷ ಪ್ರೀತಿ. ಇದೀಗ ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿರುವ ಹಸುವೊಂದು ಮುದ್ದಾದ ಕರುವಿಗೆ ಜನ್ಮ ನೀಡಿದೆ. ಆ ಕರುವಿಗೆ ದೀಪಜ್ಯೋತಿ ಎಂದು ಹೆಸರಿಟ್ಟಿದ್ದಾರೆ. ದೀಪಜ್ಯೋತಿ ಕರುವಿನ ಹಣೆಯಲ್ಲಿ ಬಿಳಿಯಾಕಾರದ ಚಿತ್ರವೊಂದು ಮೂಡಿದ್ದು, ಅದಕ್ಕೆ ದೀಪಜ್ಯೋತಿ ಎಂದು ಹೆಸರಿಡಲಾಗಿದೆ. ಮುದ್ದಾದ ಕರುವಿನ ಜೊತೆಗೆ ಪ್ರಧಾನಿ ಮೋದಿಯವರು ಕಾಲ ಕಳೆದಿದ್ದಾರೆ. ಕರುವನ್ನು ದೇವರ ಮನೆಗೆ ಕರೆದೊಯ್ದು ಪೂಜೆ ಸಲ್ಲಿಸಿದ್ದಾರೆ. ಮಾತ್ರವಲ್ಲದೆ ಗೋವು ಸರ್ವಸುಖ ಪ್ರದಾ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ವಿಡಿಯೋ ವೀಕ್ಷಿಸಲು ಲಿಂಕ್‌ ಕ್ಲಿಕ್‌ ಮಾಡಿ…

https://x.com/narendramodi/status/1834843837409243216?ref_src=twsrc%5Etfw%7Ctwcamp%5Etweetembed%7Ctwterm%5E1834843837409243216%7Ctwgr%5E85c3285cd043e205b63c54b254f9f430cad722a5%7Ctwcon%5Es1_&ref_url=https%3A%2F%2Fnewsfirstlive.com%2Fdeepajyoti-kissed-pm-modi-on-the-cheek%2F

RELATED ARTICLES
- Advertisment -
Google search engine

Most Popular