ಕುಂಭಕಾಶಿ ನಾಗಾಚಲ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನೂತನವಾಗಿ ಶೃಂಗೇರಿ ಶಂಕರ ಮಠವನ್ನು ಸ್ಥಾಪಿಸ ಅಂಗವಾಗಿ ಪರಮಪೂಜ್ಯ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಣಾಧೀಶ್ವರರಾದ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ ಪೂರ್ಣ ಆಶೀರ್ವಾದದೊಂದಿಗೆ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾ ಸನ್ನಿದಾನಂಗಳವರು ಪಂಚ ಲೋಹದ ಶಾರದಾ ಅಮ್ಮ ಮತ್ತು ಜಗದ್ಗುರು ಶ್ರೀ ಶಂಕರಾಚಾರ್ಯರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಶೃಂಗೇರಿ ಶ್ರೀ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿ, ನಾಗಪಾತ್ರಿಗಳಾದ ವೇದಮೂರ್ತಿ ಲೋಕೇಶ ಅಡಿಗ ಬಡಾಕೆರೆ ಅವರಿಗೆ ಮೂರ್ತಿಯನ್ನು ಹಸ್ತಾಂತರಿಸಿದರು.
ಸಾನಿಧ್ಯದಲ್ಲಿ ಮಾರ್ಚ್25ರಿಂದ ಮಾರ್ಚ್ 28ರ ತನಕ ಶೃಂಗೇರಿ ಜಗದ್ಗುರುಗಳ ದಿವ್ಯ ಉಪಸ್ಥಿತಿಯಲ್ಲಿ ಶೃಂಗೇರಿ ಶಂಕರ ಮಠ ಸ್ಥಾಪನೆಗೊಳ್ಳುವ ಕಾರ್ಯಕ್ರಮದೊಂದಿಗೆ ಮಾ.28 ರಂದು ಜರುಗುವ ನಾಗಮಂಡಲೋತ್ಸವ ಕಾರ್ಯಕ್ರಮದ ಚಪ್ಪರ ಮುಹೂರ್ತ ಕಾರ್ಯಕ್ರಮವು ಮಾರ್ಚ್.9ರಂದು ಬೆಳಗ್ಗೆ 6.30ಕ್ಕೆ ನಡೆಯಲಿದೆ ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿ, ನಾಗಪಾತ್ರಿಗಳಾದ ವೇದಮೂರ್ತಿ ಲೋಕೇಶ ಅಡಿಗ ಬಡಾಕೆರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ದೇವಸ್ಥಾನದ ಸಂಸ್ಥಾಪಕರಾದ ಅಮಿತಾ ಕಲ್ಲುಜ್ಜಿಕ್ಟರ್ ಮತ್ತು ಅರುಣ್ ಕಲ್ಲುಜ್ಜಿಕರ್ ನಾಗೇಂದ್ರ ಅಡಿಗ, ಸಮಿತಿ ಪ್ರಮುಖರಾದ ಪ್ರಭಾಕರ ಬಿ ಕುಂಭಕಾಶಿ, ಲಕ್ಷ್ಮೀನಾರಾಯಣ ವೈದ್ಯ, ವಾದಿರಾಜ ಹೆಬ್ಬಾರ್, ಬಾಬಣ್ಣ ಪೂಜಾರಿ, ಜಯಾನಂದ ಖಾರ್ವಿ, ಶ್ರೀಧರ ಪುರಾಣಿಕ್, ಸುಪ್ರೀತಾ ಪುರಾಣಿಕ್, ದೇವರಾಜ ಮೊಗವೀರ, ಪರಮೇಶ್ವರ ಉಡುಪ ಉಪಸ್ಥಿತರಿದ್ದರು.