ಹೈದರಾಬಾದ್: ಹಿಂಸಾಚಾರಕ್ಕೆ ಪ್ರಚೋದನೆ ಹಾಗೂ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ ಆರೋಪದ ಮೇಲೆ ಪಾಪ್ಯೂಲ‌ ಫ್ರೆಂಟ್ ಆಫ್ ಇಂಡಿಯಾದ (ಪಿಎಫ್‌ಐ) ಆಂಧ್ರ ಮತ್ತು ತೆಲಂಗಾಣ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ತಂಡ ಭಾನುವಾರ ದಾಳಿ ನಡೆಸಿದೆ. ಎನ್‌ಐಎ ಅಧಿಕಾರಿಗಳ 23 ತಂಡಗಳು ಸುಮಾರು 40 ಕಡೆ ಏಕ ಕಾಲಕ್ಕೆ ದಾಳಿ ನಡೆಸಿದ್ದು, ಸಂಘಟನೆಯ ನಾಲ್ವರು ಪ್ರಮುಖ ನಾಯಕರನ್ನು ಬಂಧಿಸಲಾಗಿದೆ.
ದೇಶದಲ್ಲಿ ಕೋಮುಸೌಹಾರ್ದತೆ ಕದಡುವ ಯತ್ತ, ಹಿಂಸಾಚಾರಕ್ಕೆ ಪ್ರಚೋದನೆ ಹಾಗೂ ಕಾನೂನು ಬಾಹಿರ ಚಟುವಟಿಕೆ ನಡೆಸಿರುವ ಆರೋಪದ ಮೇಲೆ ಪಾಪ್ಯುಲರ್ ಫ್ರಂಟ್ ಇಂಡಿಯಾದ (ಪಿಎಫ್‌ಐ) ವಿವಿಧ ಸ್ಥಳಗಳಲ್ಲಿನ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಭಾನುವಾರ ನಡೆಸಿದೆ. ತೆಲಂಗಾಣ, ಆಂಧ್ರಪ್ರದೇಶದಲ್ಲಿ ಸಕ್ರಿಯರಾ ಗಿದ್ದು ಕೋಮುಘರ್ಷಣೆಗೆ ಪ್ರಚೋದನೆ ನೀಡುತ್ತಿದ್ದ ಆರೋಪದ ಮೇರೆಗೆ ಪಿಎಫ್‌ಐನ ನಾಲ್ವರು ಪಮುಖ ನಾಯಕರನ್ನು ಬಂಧಿಸಲಾಗಿದೆ.

ಎರಡೂ ರಾಜ್ಯಗಳ ಸುಮಾರು 40 ಪ್ರದೇಶದಲ್ಲಿ ಏಕಕಾಲಕ್ಕೆ ದಾಳಿ ನಡೆದಿದೆ. ಎನ್ ಐಎ ಅಧಿಕಾರಿಗಳ 23 ತಂಡಗಳು ದಾಳಿ ವೇಳೆಆರೋಪಿಗಳಿಂದ ಲ್ಯಾಪ್‌ಟಾಪ್‌ಗಳು, ಮೊಬೈಲ್‌ಗಳು, ಹಿಂಸಾಚಾರಕ್ಕೆ ಪ್ರಚೋದನೆ ನೀಡಲು ಸಿದ್ಧಪಡಿಸಲಾಗುತ್ತಿದ್ದ ಭಿತ್ತಿಪತ್ರಗಳ ಜತೆಗೆ ಕೆಲವುಯ ಮಾರಕಾಸ್ತ್ರಗಳನ್ನು ಜಪ್ತಿ ಮಾಡಿವೆ. ದಾಳಿಯಲ್ಲಿ ಸುಮಾರು 8.50 ಲಕ್ಷ ರೂ. ಅಕ್ರಮ ನಗದು ವಶಪಡಿಸಿಕೊಳ್ಳಲಾಗಿದೆ. ನಿಜಾಮಾಬಾದ್‌ನಲ್ಲಿ 23 ಕಡೆ, ಹೈದರಾಬಾದ್ ನ 4 ಸ್ಥಳ ಸೇರಿ ತೆಲಂಗಾಣದಲ್ಲಿ 38 ಸ್ಥಳದಲ್ಲಿ ರೇಡ್ ಮಾಡಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು, ಆಂಧ್ರಪ್ರದೇಶದ ಕರ್ನೂಲ್ ಹಾಗೂ ನೆಲ್ಲೂರು ಜಿಲ್ಲೆಯ ತಲಾ ಒಂದು ಕಡೆ ದಾಳಿ ನಡೆದಿದೆ.