Saturday, October 5, 2024
HomeUncategorizedನಿಡ್ಡೋಡಿ: ಶ್ರೀ ಸತ್ಯನಾರಾಯಣ ಪ್ರಾಥಮಿಕ ಶಾಲೆಯಲ್ಲಿ ಸಮವಸ್ತ್ರ ಹಾಗೂ ಪುಸ್ತಕ ವಿತರಣೆ

ನಿಡ್ಡೋಡಿ: ಶ್ರೀ ಸತ್ಯನಾರಾಯಣ ಪ್ರಾಥಮಿಕ ಶಾಲೆಯಲ್ಲಿ ಸಮವಸ್ತ್ರ ಹಾಗೂ ಪುಸ್ತಕ ವಿತರಣೆ

ಉಡುಪಿ : ಶ್ರೀ ಸತ್ಯನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮವಸ್ತ್ರ ಹಾಗೂ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮವು ಶನಿವಾರ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಯಾದುನಾರಾಯಣ ಶೆಟ್ಟಿ ಅವರ ಶುಭಹಾರೈಕೆಗಳೊಂದಿಗೆ ಪ್ರಾರಂಭಿಸಲಾಯಿತು.

ಬಿ.ಕೃಷ್ಣ ರೈ ನಿಡ್ಡೋಡಿ ಬಾವ ಅವರ ಪ್ರಾಯೋಜಕತ್ವದಲ್ಲಿ ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ನೀಡಲಾಯಿತು. ಚಂದಪ್ಪ ದಾಸ್, ರವಳಪ್ಪ ಕಾಮತ್ ನಿಡ್ಡೋಡಿ, ಜಯರಾಮ್ ಸುವರ್ಣ ನಿಡ್ಡೋಡಿ, ವಿನೋದರ್ ಸುವರ್ಣ ಮುಂಬೈ ಅವರ ಪ್ರಾಯೋಜಕತ್ವದಲ್ಲಿ ಸಮವಸ್ತ್ರ ಹಾಗೂ ಸ್ಕೂಲ್ ಬೆಲ್ಟ್ ನೀಡಲಾಯಿತು.

ಕಾರ್ಯಕ್ರಮದಲ್ಲಿ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಬಾಬುರಾಜೇಂದ್ರ ಪ್ರಸಾದ್ ನಿಡ್ಡೋಡಿ, ಕಾರ್ಯದರ್ಶಿ ಯಾದ ಚಂದ್ರಹಾಸ್ ಜೋಗಿ, ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ಯಾಮಸುಂದರ್ ರಾವ್, ಹಳೆ ವಿದ್ಯಾರ್ಥಿ ಸಂಘದ ಸದಸ್ಯರಾದ ಚಂದಪ್ಪ ದಾಸ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಜಯಂತಿ, ಶಾಲಾ ಮುಖ್ಯ ಶಿಕ್ಷಕಿಯರಾದ ಸೌಮ್ಯ, ಅಮಿತ, ಸಹ ಶಿಕ್ಷಕರಾದ ಜ್ಯೋತಿ, ಪ್ರಜ್ಞಾ, ನಿಶ್ಮಿತಾ ಹಾಗೂ ಪೋಷಕರು,ಮಕ್ಕಳು ಉಪಸ್ಥಿತರಿದ್ದರು.

ಶಿಕ್ಷಕಿ ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು, ನಿಶ್ಮಿತಾ ವಂದಿಸಿದರು.

RELATED ARTICLES
- Advertisment -
Google search engine

Most Popular