ಮೂಡಬಿದ್ರೆ :ದಿನಾಂಕ 25-08-2024 ಆದಿತ್ಯವಾರ ಅಂಗನವಾಡಿ ಕೇಂದ್ರ, ಬಂಗೇರಪದವು, ನಿಡ್ಡೋಡಿ ಉತ್ಸಹ ಯುವಕರು ಬಂಗೇರಪದವು ಹಾಗೂ ಲಯನ್ಸ್ ಕ್ಲಬ್ ನಿಡ್ಡೋಡಿ, ಕಲ್ಲಮುಂಡ್ಕೂರು ಇವರ ಸಹಯೋಗದಿಂದ ಮಕ್ಕಳಿಗೆ ಕೃಷ್ಣ ವೇಷ, ಹುಲಿ ವೇಷ ಹಾಗೂ ಯಕ್ಷಗಾನ ವೇಷ ಹಾಕುದರ ಮೂಲಕ ಬಂಗೇರಪದವು ಇಲ್ಲಿಂದ ಶ್ರೀನಾರಾಯಣಗುರು ಮಂದಿರದವರೆಗೆ ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು ಹಾಗೂ ಯುವಕ ಯುವತಿಯರು ಮತ್ತು ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪ್ರೇಮ ಶೆಟ್ಟಿ ನಿಡ್ಡೋಡಿ ಹಾಗೂ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಕಲ್ಯಾಣಿ ಬಂಗೇರಪದವು, ಶ್ರೀ ಜನಾರ್ದನ ಗೌಡ ಕೊಲತ್ತಾರು ಹಾಗೂ ಉತ್ಸಹ ಯುವಕರ ಸರ್ವಸದಸ್ಯರ ಮತ್ತು ನಿಡ್ಡೋಡಿ ಕಲ್ಲಮುಂಡ್ಕೂರು ಲಯನ್ಸ್ ಕ್ಲಬ್ ಅಧ್ಯಕ್ಷರು,ಉಪಾಧ್ಯಕ್ಷರು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ನಿಡ್ಡೋಡಿ ಉತ್ಸಹ ಯುವಕರು ಬಂಗೇರಪದವು ಹಾಗೂ ಲಯನ್ಸ್ ಕ್ಲಬ್ ನಿಡ್ಡೋಡಿ ವತಿಯಿಂದ ವಿವಿಧ ಆಟೋಟ ಸ್ಪರ್ಧೆ, ಬಹುಮಾನ ವಿತರಣೆ
RELATED ARTICLES