Friday, March 21, 2025
Homeಕಾಸರಗೋಡುನಿಮ್ಮೂರಿನ ಚುಟುಕು ಕವಿಗಳು, ಹಿರಿಯ ಯುವ ಕವಿ, ಸಾಹಿತಿಗಳ ಹೆಸರು ವಿಳಾಸ ಸಂಗ್ರಹ "ಅಕ್ಷರ ಅಭಿಯಾನಕ್ಕೆ...

ನಿಮ್ಮೂರಿನ ಚುಟುಕು ಕವಿಗಳು, ಹಿರಿಯ ಯುವ ಕವಿ, ಸಾಹಿತಿಗಳ ಹೆಸರು ವಿಳಾಸ ಸಂಗ್ರಹ “ಅಕ್ಷರ ಅಭಿಯಾನಕ್ಕೆ ಕೈಜೋಡಿಸಿ ಬನ್ನಿ ಕಾಸರಗೋಡು ಕನ್ನಡ ಗ್ರಾಮದ ನಮ್ಮೂರಿಗೆ “

ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಇದರ 25 ನೇ ಸಂಸ್ಥಾಪನಾ ವರ್ಷಾಚರಣೆಯ ಅಂಗವಾಗಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ದಿನಾಂಕ 27 ಮಾರ್ಚ್ 2025 ಗುರುವಾರದಂದು ನಡೆಯುವ ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯಾದ್ಯಂತ ನೆಲೆಸಿರುವ ನಿಮ್ಮೂರಿನ ಚುಟುಕು ಕವಿಗಳು, ವಿದ್ಯಾರ್ಥಿ ಕವಿಗಳು, ಹಿರಿಯ ಯುವ ಕವಿ,ಸಾಹಿತಿಗಳ,ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯ ಸಂಗ್ರಹ ಅಕ್ಷರ ಅಭಿಯಾನಕ್ಕೆ ಕೈಜೋಡಿಸಲು ವಿನಂತಿಸಲಾಗಿದೆ.

ನಿಮ್ಮೂರಿನ ಚುಟುಕು ಕವಿಗಳು,ವಿದ್ಯಾರ್ಥಿ ಕವಿಗಳು, ಹಿರಿಯ ಯುವ ಕವಿ, ಸಾಹಿತಿಗಳನ್ನು ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನದ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿಯಲ್ಲಿ ಚುಟುಕು ವಾಚನದ ಕವಿಗಳಾಗಿ,ವಿಶೇಷ ಆಹ್ವಾನಿತರಾಗಿ ಈ ಮೂಲಕ ಆಮಂತ್ರಿಸಲಾಗಿದ್ದು ತಾವೆಲ್ಲರೂ ನೂರಾರು ಸಂಖ್ಯೆಯಲ್ಲಿ ಬನ್ನಿ ನಮ್ಮೂರಿಗೆ, ಕಾಸರಗೋಡು ಕನ್ನಡ ಗ್ರಾಮದ ಊರಿಗೆ. ಕಾಸರಗೋಡು,ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯದ ವಿವಿಧ ಜೆಲ್ಲೆಗಳಿಂದ ಸುಮಾರು 500 ಮಂದಿ ಚುಟುಕು ಕವಿ,ವಿದ್ಯಾರ್ಥಿ, ಕವಿ,ಹಿರಿಯ ಯುವ ಕವಿ,ಸಾಹಿತಿ, ಲೇಖಕರು, ಬರಹಗಾರರು, ಮಾಧ್ಯಮದವರು ಮತ್ತು ಕಲಾವಿದರು ಸಮಾವೇಶಗೊಳ್ಳಲಿದ್ದು ನಾಡಿನ ಬಹುಭಾಷಾ ಸಾರ್ವಜನಿಕ ಜನರಿಗೆ ಈ ಮೂಲಕ ಗೌರವ ಪೂರ್ವಕವಾಗಿ ಆಮಂತ್ರಿಸುತ್ತಿದ್ದೇವೆ.

ಕಾಸರಗೋಡು,ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪ್ರತಿಯೊಬ್ಬ ಚುಟುಕು ಕವಿಗಳು, ವಿದ್ಯಾರ್ಥಿ ಕವಿಗಳು,ಹಿರಿಯ, ಯುವ ಕವಿಗಳು, ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವಂತೆ ಆಹ್ವಾನಿಸುತಿದ್ದೇವೆ. ಕಾಸರಗೋಡು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ, ಜಿಲ್ಲಾ ತಾಲೂಕು,ಬ್ಲೋಕ್, ಪಟ್ಟಣ, ಗ್ರಾಮ ಪಂಚಾಯತು, ನಗರ ಸಭೆ, ಮಹಾನಗರಪಾಲಿಕೆಯ ಪ್ರತಿ ವಾರ್ಡ್ ನಿಂದ ಕನಿಷ್ಠ 10 ಮಂದಿ ಕವಿಗಳು ಹಾಗೂ ಕವಿ ಬಂಧು ಮಿತ್ರರು ಸ್ವ ಇಚ್ಛೆಯಿಂದ ಭಾಗವಹಿಸುವಂತೆ ವಿನಂತಿಸಲಾಗಿದೆ.

ಕಾಸರಗೋಡು ಕನ್ನಡ ಗ್ರಾಮದಲ್ಲಿ ಕವಿಗಳು, ಸಾಹಿತಿಗಳು,ಲೇಖಕರು, ಬರಹಕಾರರು, ಪುಸ್ತಕ ಪ್ರಕಾಶಕರು, ಪುಸ್ತಕ ಮಾರಾಟಗಾರಾರು, ವಿದ್ವಾಂಸರು, ಅಧ್ಯಾಪಕರು, ವಿದ್ಯಾರ್ಥಿಗಳು, ರಾಜ್ಯದ ವಿವಿಧ ಸುದ್ದಿ ವಾಹಿನಿ, ಮಾಧ್ಯಮದವರು, ಪತ್ರಕರ್ತರು, ಕಲಾವಿದರು, ಸಾಹಿತ್ಯಾಸಕ್ತರಿಗೆ, ಸಾಂಸ್ಕೃತಿಕ ಕಲಾಭಿಮಾನಿಗಳಿಗೆ ಸಮ್ಮೇಳನದಂದು ಉಪಹಾರ ಮತ್ತು ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿದೆ.
ಈ ದಿನ ಕಾಸರಗೋಡು ಕನ್ನಡ ಗ್ರಾಮವು ಕವಿಗಳು ಸಾಹಿತಿಗಳು ಕಲಾವಿದರು ನಡೆದಾಡುವ ಕನ್ನಡ ಗ್ರಾಮವಾಗಿ ಪರಿವರ್ತನೆಗೊಳ್ಳಲಿದೆ. ಕಾಸರಗೋಡು ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಂದ ಕನಿಷ್ಠ 25 ಮಂದಿ ವಿದ್ಯಾರ್ಥಿಗಳು, ಅಧ್ಯಾಪಕರು ಭಾಗವಹಿಸುವಂತೆ ಆಹ್ವಾನಿಸಲಾಗಿದೆ.

ಆದುದರಿಂದ ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಸಕ್ರೀಯವಾಗಿ ಭಾಗವಹಿಸುವ ಕವಿ, ಸಾಹಿತಿಗಳು, ವಿದ್ಯಾರ್ಥಿಗಳು ಅಧ್ಯಾಪಕರು ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನು ಪತ್ರದಲ್ಲಿ ಬರೆದು ಅಂಚೆ ಮೂಲಕ ದಿನಾಂಕ 28 ಫೆಬ್ರವರಿ 2025 ರ ಮುಂಚಿತವಾಗಿ ಶಿವರಾಮ ಕಾಸರಗೋಡು,ಅಧ್ಯಕ್ಷರು, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕನ್ನಡ ಗ್ರಾಮ, ಕನ್ನಡ ಗ್ರಾಮ ರಸ್ತೆ,
ಕಾಸರಗೋಡು -671121
ಮೊಬೈಲ್ :-9448572016, 9901951965 ಈ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ.
ರಾಜ್ಯಮಟ್ಟದ ಚುಟುಕು ಕವಿಗೋಷ್ಠಿ ಮತ್ತು ರಾಜ್ಯಮಟ್ಟದ ವಿದ್ಯಾರ್ಥಿ ಚುಟುಕು ಕವಿಗೋಷ್ಟಿಯಲ್ಲಿ ಪಾಲ್ಗೊಳ್ಳುವವರು ತಮ್ಮ ಹೆಸರು,ವಿಳಾಸ,ಮೊಬೈಲ್, ವಾಟ್ಸಪ್ ಸಂಖ್ಯೆಯನ್ನು ಕನ್ನಡದಲ್ಲಿ ಟೈಪ್ ಮಾಡಿ. ತಾವು ತಪ್ಪದೇ ಭಾಗವಹಿಸುವುದಾಗಿ ಒಪ್ಪಿಗೆ ಪತ್ರವನ್ನು ವಾಟ್ಸಪ್ ಮೂಲಕ ಶಿವರಾಮ ಕಾಸರಗೋಡು 9448572016 ಇವರಿಗೆ ತಿಳಿಸಬಹುದು.

RELATED ARTICLES
- Advertisment -
Google search engine

Most Popular