ಬಪ್ಪನಾಡು ದೇವಳದಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದ ಮನೋಹರ ಶೆಟ್ಟಿ ಅವರು ಸಮಾಜಕ್ಕೆ ಅನುಕರಣೀಯರು. ಯಾವುದೇ ಸ್ವಾರ್ಥ ಇಲ್ಲದೆ ಒಳ್ಳೆಯ ಮನೋಭಾವನೆ ದಕ್ಷತೆ, ಶಿಸ್ತು ಮತ್ತು ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದ ಅವರ ಅಗಲುವಿಕೆ ತುಂಬಲಾರದ ನಷ್ಟ ಎಂದು ಶ್ರೀಕ್ಷೇತ್ರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದ ಆನುವಂಶಿಕ ಮೊಕ್ತೇಸರರಾದ ದುಗ್ಗಣ್ಣ ಸಾವಂತರು ಹೇಳಿದರು.
ದೇವಳದಲ್ಲಿ 12 ವರ್ಷ ಕಾಲ ಆನುವಂಶಿಕ ಮತ್ತು ಆಡಳಿತ ಮೊಕ್ತೇಸರರಾಗಿ ದಕ್ಷ ಆಡಳಿತ ನೀಡಿ ಸ್ವರ್ಗಸ್ಥರಾದ ಎನ್.ಎಸ್ ಮನೋಹರ ಶೆಟ್ಟಿ ಕಕ್ವಗುತ್ತು ಅವರಿಗೆ ಶ್ರೀ ಕ್ಷೇತ್ರ ಬಪ್ಪನಾಡುವಿನ ಜ್ಞಾನ ಮಂದಿರದಲ್ಲಿ ಹಮ್ಮಿಕೊಂಡ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಸಕ ಉಮಾನಾಥ ಎ. ಕೋಟ್ಯಾನ್, ಮಾಜಿ ಸಚಿವ.ಕೆ ಅಭಯ ಚಂದ್ರ ಜೈನ್, ಕಸಾಪ ರಾಜ್ಯ ಪೂರ್ವಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು, ಧಾರ್ಮಿಕ ಪರಿಷತ್ ಸದಸ್ಯೆ ಡಾ ಮಲ್ಲಿಕಾ ಪಕ್ಕಳ, ದೇವಳದ ಕರ‍್ಯ ನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ಅರ್ಚಕರಾದ ಶ್ರೀಪತಿ ಉಪಾಧ್ಯಾಯ ಮತ್ತು ನರಸಿಂಹ ಭಟ್, ಸಸಿಹಿತ್ಲು ಭಗವತಿ ದೇವಳದ ಅಪ್ಪು ಯಾನೆ ಶ್ರೀನಿವಾಸ ಪೂಜಾರಿ, ಎಳತ್ತೂರು ದೇವಳದ ಸಂತೋಷ್ ಕುಮಾರ ಹೆಗ್ಡೆ, ಬಿಲ್ಲವ ಸಂಘದ ವಾಮನ ಕೋಟ್ಯಾನ್ ನಡಿಕುದ್ರು, ಬಂಟರ ಸಂಘದ ಅಶೋಕ್ ಕುಮಾರ್ ಶೆಟ್ಟಿ, ಬಪ್ಪನಾಡು ದೇವಳದ ಜೀರ್ಣೋದ್ಧಾರ ಮಾಜಿ ಕಾರ್ಯಧ್ಯಕ್ಷ ಶೇಖರ್ ಶೆಟ್ಟಿ ಕಿಲ್ಪಾಡಿ ಭಂಡಸಾಲೆ, ಪತಂಜಲಿ ಯೋಗ ಸಮಿತಿಯ ರಾಜೇಶ್ ಭುವನಾಭಿರಾಮ್ ಉಡುಪ, ಗುರುವಪ್ಪ ಕೋಟ್ಯಾನ್, ಸುನೀಲ್ ಆಳ್ವ ನುಡಿನಮನ ಸಲ್ಲಿಸಿದರು.
ದೇವಳದ ಪವಿತ್ರಪಾಣಿ ಅತ್ತೂರು ಬೈಲಮನೆ ವೆಂಕಟರಾಜ ಉಡುಪ, ಜೀರ್ಣೋದ್ಧಾರ ಸಮಿತಿಯ ಮಾಜಿ ಅಧ್ಯಕ್ಷ ಪಾದೆಮನೆ ಜಯಂತ್ ರೈ, ಪ್ರಮುಖರಾದ ಸುಭಾಶ್ಚಂದ್ರ ಭಂಡಾರಿ, ಕೊಲ್ನಾಡುಗುತ್ತು ಕಿರಣ್ ಶೆಟ್ಟಿ, ರಾಮಚಂದ್ರ ನಾಯ್ಕ್ ,ಹರಿಶ್ಚಂದ್ರ ಪಿ ಸಾಲಿಯಾನ್, ಮೂಲ್ಕಿ ಸಪಂ ಅಧ್ಯಕ್ಷ ಸತೀಶ್ ಅಂಚನ್. ಜೀವನ್ ಕೆ.ಶೆಟ್ಟಿ, ಉದಯ ಶೆಟ್ಟಿ, ಜಯ ಶೆಟ್ಟಿ ,ಮಯೂರಿ, ಸಂಜೀವ ದೇವಾಡಿಗ ನಾಗೇಶ್ ಬಪ್ಪನಾಡು ಶಿವಶಂಕರ್ ವರ್ಮ ಮನೋಹರ ಶೆಟ್ಟಿ ಅವರ ಕುಟುಂಬಿಕರು ಉಪಸ್ಥಿತರಿದ್ದರು.