ಎನ್ಎನ್ಓ ಕಮ್ಯೂನಿಟಿ ಸೆಂಟರ್ ಕುಂದಾಪುರ ಇದರ ತರಬೇತಿ ಕೇಂದ್ರ ಉದ್ಘಾಟನೆ

0
27

ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಕುಂದಾಪುರ ಇದರ ನೂತನ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭ ಇತ್ತೀಚಿಗೆ ನಡೆಯಿತು. ಏನ್ ಏನ್ ಒ ಕೇಂದ್ರ ಸಮಿತಿಯ ಅಧ್ಯಕ್ಷ ರಾದ ಮೊಹಮ್ಮದ್ ಸಲೀಮ್ ಮೂಡಬಿದ್ರೆ ತರಬೇತಿ ಕೇಂದ್ರ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಹಾಗು ಯುವಕರಿಗೆ ಪ್ರಾರಂಭದಲ್ಲು ಪಠ್ಯ ಪುಸ್ತಕದ ಜೊತೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಇದರಿಂದ ವಿದ್ಯಾರ್ಥಿಗಳಿಗೆ ತನ್ನ ವಿದ್ಯಾಭ್ಯಾಸದ ನಂತರ ಉದ್ಯೋಗಕ್ಕಾಗಿ ಅಥವ ಕಂಪನಿಗಳಲ್ಲಿ ಅಥವ ಸ್ವಂತ ಉದ್ಯೋಗ ಮಾಡುವಾಗ ನಾವು ಪಡೆದಂತ ತರಬೇತಿ ಉಪಯೋಗ ಆಗುತ್ತದೆ ಎಂದು ನುಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಏನ್ ಏನ್ ಒ ಕಮ್ಯೂನಿಟಿ ಸೆಂಟರ್ ಕುಂದಾಪುರ ದ ಅಧ್ಯಕ್ಷ ರಾದ ಅಬ್ದುಲ್ ಮುನಾಫ್ ಹಂಗಾರಕಟ್ಟೆ ವಹಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಕೇಂದ್ರ ಸಮಿತಿಯ ಪ್ರದಾನ ಕಾರ್ಯದರ್ಶಿ ಮೌ ಝಮಿರ್ ಅಹ್ಮದ್ ರಶಾದಿ ಏನ್ ಏನ್ ಒ ಟ್ರಸ್ಟ್ ನ ಸದ್ಯಸ್ಯ ರಾದ ಪಜ್ಲು ರಹಿಮಾನ್ ಗಂಗೊಳ್ಳಿ ಏನ್ ಏನ್ ಒ ಉಡುಪಿ ಜಿಲ್ಲಾ ಅಧ್ಯಕ್ಷ ನಕ್ವಾ ಯಾಯ್ಯ ಮಲ್ಪೆ ಕೇಂದ್ರ ಸಮಿತಿಯ ಖಜಾಂಚಿ ಪೀರು ಸಾಹೇಬ್ ಉಡುಪಿ, ನಮ್ಮ ನಾಡ ಒಕ್ಕೂಟದ ಕೇಂದ್ರ ಸಮಿತಿ ಸದಸ್ಯರಾದ ಮುಸ್ತಾಕ್ ಅಹ್ಮದ್ ಬೆಳ್ವೆ, ಏನ್ ಎಸ್ ಆಕಾಡೆಮಿ ಕಾರ್ಕಳ ಅಧ್ಯಕ್ಷ ರಾದ ಮೊಹಮ್ಮದ್ ಮೋಹಿಸಿನ್,ಕುಂದಾಪುರ ಏನ್ ಏನ್ ಒ ಕುಂದಾಪುರ ತಾಲೂಕು ಅಧ್ಯಕ್ಷ ಜಮಾಲ್ ಗುಲ್ವಾಡಿ, ಬೈಂದೂರು ತಾಲೂಕು ಅಧ್ಯಕ್ಷ ರಾದ ಸಯ್ಯದ್ ಅಜ್ಮಿಲ್ ಶಿರೂರ್ ವೇದಿಕೆಯಲ್ಲಿ ಯಲ್ಲಿ ಉಪಸ್ತಿರಿದ್ದರು.

ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಮೊಹಮ್ಮದ್ ರಫೀಕ್ ಬಿ ಎಸ್ ಎಫ್ ಗಂಗೊಳ್ಳಿ, ಜಿಲ್ಲಾ ಸಮಿತಿ ಸದಸ್ಯರಾದ ಮಮ್ದು ಇಬ್ರಾಹಿಂ, ಹಾರುನ್ ರಶೀದ್ ಸಾಸ್ತಾನ್, ಜಿಲ್ಲಾ ಯುವ ಸಂಘಟಕರಾದ ಅಬ್ದುಲ್ ಖಾದರ್ ಮೂಡ್ ಗೋಪಾಡಿ, ಮನ್ಸೂರ್ ಇಬ್ರಾಹಿಂ, ಅಬೂಬಕ್ಕರ್ ಮಾವಿನಕಟ್ಟೆ, ಅಲ್ತಾಫ್ ಮೂಡ್ ಗೋಪಾಡಿ, ಕಮ್ಯೂನಿಟಿ ಸೆಂಟರ್ ಕೋಶಾಧಿಕಾರಿ ಅನ್ವರ್ ಕಂಡ್ಲೂರ್, ಜವಾದ್ ಅಕ್ಬರ್ ಹಂಗಾರಕಟ್ಟೆ ಮೊಹಮ್ಮದ್ ರಫೀಕ್ ವಂಡ್ಸೆ, ಅಕ್ರಮ್ , ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನಮ್ಮ ನಾಡ ಒಕ್ಕೂಟ ಸೆಂಟ್ರಲ್ ಕಮಿಟಿ ಅಧ್ಯಕ್ಷ ಸಲೀಂ ಸಾಹೇಬ್ , ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ ಹಾಗೂ ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಅಧ್ಯಕ್ಷ ಅಬ್ದುಲ್ ಮುನಾಫ್ ಹಂಗಾರಕಟ್ಟೆಯವರನು ಸನ್ಮಾನಿಸಲಾಯಿತು.ಏನ್ ಏನ್ ಒಕಮ್ಯೂನಿಟಿ ಸೆಂಟರ್ ಕುಂದಾಪುರ ಇದರ ಪ್ರದಾನ ಕಾರ್ಯದರ್ಶಿ ಹುಸೇನ್ ಹೈಕಾಡಿ ಸ್ವಾಗತಿಸಿ ಪ್ರಸ್ತಾವನೆಗೈದರು. ಉಡುಪಿ ಜಿಲ್ಲಾ ಉಡುಪಿ ಘಟಕದ ಪ್ರದಾನ ಕಾರ್ಯದರ್ಶಿ ಫಾಝಿಲ್ ಅಹ್ಮದ್ ಆದಿ ಉಡುಪಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here