ಇತ್ತೀಚಿಗೆ ಹಾಸನದ ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್( ರಿ) ರಾಜ್ಯ ಘಟಕ ಹಾಸನ ಜಿಲ್ಲೆ ವತಿಯಿಂದ ಅದ್ದೂರಿಯಾಗಿ ಆಚರಿಸಿದರು. ಈ ವಿಶೇಷವಾದ ದಿನದಂದು ಟ್ರಸ್ಟ್ ನ ಎರಡು ಲೋಗೋಗಳನ್ನು ಬಿಡುಗಡೆ ಮಾಡುತ್ತಾ ಲೋಗೋವನ್ನು ಅಧಿಕೃತಗೊಳಿಸಿದರು.


ಬದುಕು ಎಂದ ಮೇಲೆ ಹೆಣ್ಣು ಮಕ್ಕಳು ಸ್ವಾವಲಂಬಿಯಾಗಿ ಬದುಕಬೇಕು ನಮ್ಮ ಶಾಲೆಗೆ ಚಿರಪರಿತರಾಗಿರುವ ಸೌಮ್ಯ,ಹೆಚ್. ಎಸ್. ಪ್ರತಿಮಾ ಹಾಸನ್,ನೀಲಮ್ಮ ಸುರೇಶ್,ಚಾಂದಿನಿ, ಶ್ವೇತಾ,ಮಂಜುನಾಥ್ ಹೆಚ್. ಎಸ್, ರವರು ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ (ರಿ) ಟ್ರಸ್ಟಿ ಗಳಾಗಿದ್ದು ಮುಂದೆ ಇವರ ಕಾರ್ಯವು ಉತ್ತಮವಾಗಿ ಸಾಗಲೆಂದು ಆಶಿಸುತ್ತೇವೆ ಎಂದು ಶಾಲೆಯ ಅಧ್ಯಕ್ಷರು ಉದಯಕುಮಾರ್ ಅವರು ತಿಳಿಸಿದರು. ನಂತರ ಮಹಿಳೆಯರ ಹಾಗೂ ಸಮಾಜದ ಏಳಿಗೆಗಾಗಿ ಪ್ರಾರಂಭಿಸಿರುವ ಈ ಟ್ರಸ್ಟ್ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಸಾಗಲೆಂದು ಆಶಿಸುತ್ತೇವೆ.
ಅದಕ್ಕೆ ಹಲವರ ಬೆಂಬಲ ಅವಶ್ಯಕತೆ ಇದೆ ಮಹಿಳಾ ದಿನಾಚರಣೆ ಏಕೆ ಆಚರಿಸಬೇಕು ಎಂಬುದನ್ನು ಚಾಂದಿನಿ ರವರು ತಿಳಿಸಿದ್ದರು. ತದನಂತರ ಎರಡು ಲೋಗೋಗಳು ವಿಭಿನ್ನವಾಗಿದ್ದು ಟ್ರಸ್ಟಿನ ಕಾರ್ಯರೂಪ ಹೇಗೆ ಮಾಡುತ್ತದೆ ಎಂಬುದನ್ನು ತಿಳಿಸುವುದಕ್ಕೆ ಬಿಡುಗಡೆ ಮಾಡಲಾಗಿದೆ. ಇದು ಶಾಶ್ವತವಾಗಿ ಉಳಿಯುತ್ತದೆ ಎಂದು ಸೌಮ್ಯ ರವರು ತಿಳಿಸಿದರು.
ಆ ನಂತರ ನಮ್ಮ ಸಂಸ್ಥೆಯು ಬಹಳಷ್ಟು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಇಂದು ರೆಜಿಸ್ಟರ್ ಆದ ನಂತರ ಟ್ರಸ್ಟ್ ನಾ ಉದ್ಘಾಟನೆಯೊಂದಿಗೆ ಲೋಗೋಗಳ ಬಿಡುಗಡೆಯನ್ನು ಮಾಡಿದ್ದೇವೆ. ರಿಜಿಸ್ಟ್ರೇಷನ್ ಮಾಡುವ ಉದ್ದೇಶ ಸಮಾಜದಲ್ಲಿ ಒಂದು ಅಸ್ತಿತ್ವವನ್ನು ಉಳಿಸಿಕೊಳ್ಳಲಿ ಎಂದು ನಮ್ಮ ಟ್ರಸ್ಟ್ ರಾಜ್ಯದ್ಯಂತ ಎಲ್ಲಾ ಕ್ಷೇತ್ರದಲ್ಲೂ ಬಹುಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ. ಹೀಗೆ ಟ್ರಸ್ಟ್ ನ ಕಾರ್ಯ ಮುಂದುವರೆಯಲು ಎಲ್ಲರ ಸಹಾಯ, ಸಹಕಾರ ಬೇಕಾಗಿದೆ ಎಂಬುದನ್ನು ಸಂಸ್ಥಾಪಕ ಅಧ್ಯಕ್ಷರಾದಂತಹ ಹೆಚ್. ಎಸ್. ಪ್ರತಿಮಾ ಹಾಸನ್ ತಿಳಿಸಿದ್ದರು.
ವೇದಿಕೆಯಲ್ಲಿದ್ದಂತಹ ಎಲ್ಲಾ ಅತಿಥಿಗಳೆಲ್ಲರಿಗೂ ಸನ್ಮಾನಿಸುತ್ತಾ ಜೀವನದಲ್ಲಿ ಮುಂದು ಬರಬೇಕಾದರೆ ಮಹಿಳೆಯರಿಗೆ ಸಹಕಾರ ಹಾಗೂ ಬೆನ್ನು ತಟ್ಟುವ ಪ್ರೋತ್ಸಾಹ ಬೇಕಾಗಿದೆ ಅಂತಹ ಕೆಲಸವನ್ನು ಈ ಟ್ರಸ್ಟ್ ಮಾಡುತ್ತದೆ ಎಂಬುದನ್ನು ಎಲ್ಲರೂ ಅರಿಯುತ್ತ ಸಾಗಬೇಕಿದೆ ಎಂದು ಹಿರಿಯ ಕಲಾವಿದರು ಮಂಜೇಗೌಡ್ರು ಯೆರೆ ಹಳ್ಳಿ ರವರು ತಿಳಿಸಿದರು.
ಟ್ರಸ್ಟ್ ಈಗಾಗಲೇ ಬಹಳಷ್ಟು ಕಾರ್ಯವನ್ನು ನಿರ್ವಹಿಸಿದ್ದು ಮುಂದೆಯೂ ಎಲ್ಲ ರಂಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಲು ಸಿದ್ಧವಾಗಿದೆ ಎಂದು ಪ್ರಾಸ್ತಾವಿಕ ನುಡಿಯಲ್ಲಿ ಅನಿತಾ ರವರು ತಿಳಿಸಿದರು . ನಂತರ ಕಾರ್ಯಕ್ರಮದಲ್ಲಿ ಎಲ್ಲ ಶಿಕ್ಷಕರಿಗೂ ಪುಸ್ತಕ ಹಾಗೂ ಅತಿಥಿ ಗಣ್ಯರಿಗೆಲ್ಲ ಹಾಗೂ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಛಾಯಾರವರು ನಿರೂಪಣೆಯನ್ನು ಹೆಚ್. ಎಸ್. ಪ್ರತಿಮಾ ಹಾಸನ್ ರವರು ಅಭಿನಂದನೆಯನ್ನು ರೇಖಾ ಅವರು ಮಾಡಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರೆಲ್ಲರೂ ಹಾಗೂ ಟ್ರಸ್ಟಿನ ಸದಸ್ಯರು ಪದಾಧಿಕಾರಿಗಳು, ಮಕ್ಕಳು ಹಾಗೂ ಇನ್ನೂ ಹಲವರು ಉಪಸ್ಥಿತರಿದ್ದರು.

