Sunday, July 14, 2024
HomeUncategorizedಮೂಡುಬಿದಿರೆ | ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಲಾಕ್; ಕಾನೂನು ಉಲ್ಲಂಘನೆಗೆ ಕಠಿಣ ಕ್ರಮ

ಮೂಡುಬಿದಿರೆ | ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಲಾಕ್; ಕಾನೂನು ಉಲ್ಲಂಘನೆಗೆ ಕಠಿಣ ಕ್ರಮ

ಮೂಡುಬಿದಿರೆ: ಟ್ರಾಫಿಕ್‌ ಕಾನೂನು ಉಲ್ಲಂಘಿಸುವವರಿಗೆ ಮೂಡುಬಿದಿರೆ ಪೊಲೀಸರು ಕಠಿಣ ಕಾನೂನು ಎಚ್ಚರಿಕೆ ನೀಡಲಾರಂಭಿಸಿದ್ದಾರೆ. ಮೂಡುಬಿದಿರೆ ಪೇಟೆಯಲ್ಲಿ ನೋ ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಲಾಕ್‌ ಅಳವಡಿಸಿ ದಂಡ ವಿಧಿಸುವ ಮೂಲಕ ವಾಹನ ಸವಾರರಿಗೆ ಖಡಕ್‌ ಎಚ್ಚರ ನೀಡಲಾಗಿದೆ.
ಇನ್ಸ್‌ಪೆಕ್ಟರ್‌ ಸಂದೇಶ್‌ ಪಿ.ಜಿ. ಮಾರ್ಗದರ್ಶನದಲ್ಲಿ ಅನಪೇಕ್ಷಿತ ಸ್ಥಳಗಳಲ್ಲಿ, ಬಸ್ಸು ನಿಲ್ದಾಣಗಳಲ್ಲಿ, ನೋ ಪಾರ್ಕಿಂಗ್‌ ಪ್ರದೇಶಗಳಲ್ಲಿ ವಾಹನಗಳನ್ನು ಪಾರ್ಕಿಂಗ್‌ ಮಾಡುವುದರ ವಿರುದ್ಧ ಕಾರ್ಯಾಚರಣೆ ಆರಂಭಿಸಲಾಗಿದೆ. ಆ ಪ್ರಕಾರ ಕಳೆದ ಕೆಲವು ದಿನಗಳಿಂದ ವಾಹನ ಸವಾರರಿಗೆ ಎಚ್ಚರಿಕೆ ನೀಡಲಾಗಿತ್ತಾದರೂ, ಕ್ಯಾರೇ ಮಾಡದ ವಾಹನ ಸವಾರರಿಗೆ ಈಗ ಕಾನೂನಿನ ಬಿಸಿ ಮುಟ್ಟಿದೆ. ಅನಧಿಕೃತ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಹಲವು ವಾಹನಗಳಿಗೆ ಲಾಕ್‌ ಮಾಡಿರುವ ದೃಶ್ಯ ಇಂದು ಕಂಡುಬಂದಿದೆ.

RELATED ARTICLES
- Advertisment -
Google search engine

Most Popular