ನoದಾವರ ಚಿಕ್ಕಮೇಳ ಮನೆಮನೆಯ ಯಕ್ಷಗಾನ ತಿರುಗಾಟದ ಸಮಾರೋಪ 22/.11.2024 ಶುಕ್ರವಾರದಂದು ಸೇವೆಯಾಟದೊಂದಿಗೆ ಶ್ರೀ ಕ್ಷೇತ್ರ ನಂದಾವರಶ್ರೀ ವಿ ನಾಯಕ ಶ್ರೀ ಶಂಕರನಾರಾಯಣ ಶ್ರೀ ದುರ್ಗಾಂಬ ದೇವಸ್ಥಾನದಲ್ಲಿ ಸಂಪನ್ನಗೊಂಡಿತು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್. ಪ್ರಧಾನ ಅರ್ಚಕ ಮಹೇಶ್ ಕುಮಾರ ಬಟ್. ಆಡಳಿತ ಅಧಿಕಾರಿ ತಾರನಾಥ. ಪ್ರಬಂಧಕ ರಾಮಕೃಷ್ಣ ಭಂಡಾರಿ. ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಅರುಣ್ ಕುಮಾರ್ ಸೋಮನಾಥ. ಚಿಕ್ಕಮೇಳ ಸಂಚಾಲಕ ಭಾಸ್ಕರ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಚಿಕ್ಕ ಮೇಳ ಮನೆ ಮನೆಗೆ ಯಕ್ಷಗಾನ ಕಾರ್ಯಕ್ರಮದ ಸಂದರ್ಭದಲ್ಲಿ ಕಾಣಿಕೆ ಡಬ್ಬಿಯಲ್ಲಿ ಸಂಗ್ರಹವಾದ 40,000 ರೂಪಾಯಿಯನ್ನು ಆಡಳಿತ ಅಧಿಕಾರಿಯವರಿಗೆ ಹಸ್ತಾಂತರಿಸಲಾಯಿತು. ಚಿಕ್ಕ ಮೇಳದ ವತಿಯಿಂದ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್. ಪ್ರಧಾನ ಅರ್ಚಕಮಹೇಶ್ ಕುಮಾರ್ ಭಟ್ ಆಡಳಿತ ಅಧಿಕಾರಿ ತಾರನಾಥ ಹಾಗೂ ಸೋಮನಾಥ ಇವರುಗಳನ್ನು ಸಂಚಾಲಕ ಭಾಸ್ಕರ್ ಪೂಜಾರಿ ಶರಪಾಡಿ ಫಲ ಪುಷ್ಪ ಸ್ಮರಣಿಕೆ ಶಾಲು ಹೊಂದಿಸಿ ಹಾರ ಹಾಕಿ ಗೌರವಿಸಿದರು.
ನoದಾವರ ಚಿಕ್ಕಮೇಳ ಮನೆಮನೆಯ ಯಕ್ಷಗಾನ ತಿರುಗಾಟದ ಸಮಾರೋಪ
RELATED ARTICLES