Saturday, February 15, 2025
Homeಮೂಡುಬಿದಿರೆಸಾರ್ವಜನಿಕರಿಗೆ ಸೂಚನೆ: ಮದ್ದು ಕೊಡುವ ನೆಪದಲ್ಲಿ ವಂಚನೆ

ಸಾರ್ವಜನಿಕರಿಗೆ ಸೂಚನೆ: ಮದ್ದು ಕೊಡುವ ನೆಪದಲ್ಲಿ ವಂಚನೆ


ಮೂಡಬಿದ್ರೆ ಕೋಟೆಬಾಗಿಲು ನಿವಾಸಿಯಾದ ವೆಂಕಪ್ಪ ಪರವ ಎಂಬ ಈತ ವೃತ್ತಿಯಲ್ಲಿ ದೈವ ನರ್ತಕನಾಗಿದ್ದು ಆ ವೃತ್ತಿಗಿರುವ ಗೌರವವನ್ನು ಕಾಪಾಡದೆ ಬೇರೆ ಬೇರೆ ಊರುಗಳಿಗೆ ತೆರಳಿ ಮದ್ದು ಕಷಾಯ ಕೊಡುವ ನೆಪದಲ್ಲಿ ಹಗಲು ಹೊತ್ತಿನಲ್ಲಿ ಹೆಂಗಸರು ಹೆಣ್ಣುಮಕ್ಕಳು ಇರುವ ಮನೆಗೆ ತೆರಳಿ ಮದ್ದು ಕೊಡುವ ನೆಪದಲ್ಲಿ ಅವರ ದೇಹವನ್ನು ಸ್ಪರ್ಶಿಸಿ, ತಲೆಗೆ ಕೈ ಇಟ್ಟು ಮಂತ್ರ ಮಾಡಿ ಅವರನ್ನು ತನ್ನ ಕೈ ವಶ ಮಾಡುವ ಕಾಯಕಕ್ಕೆ ಇಳಿದಿದ್ದು.


4 ದಿವಸದ ಹಿಂದೆ ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದಲ್ಲಿ ಶಾಲೆಗೆ ಹೋಗುವ ಹುಡುಗಿಗೆ ನಿನಗೆ ಸಮಸ್ಯೆ ಉಂಟು ನಾನು ಸರಿ ಮಾಡುತ್ತೇನೆ ಎಂದು ನಂಬಿಸಿ ಅವಳ ತಲೆಗೆ ಕೈ ಇಟ್ಟು ಆ ಹುಡುಗಿಯ ಮಾನಸಿಕ ಅಸ್ವಸ್ಥತೆಗೆ ಕಾರಣನಾಗಿದ್ದಾನೆ.
ಈ ಪ್ರಕರಣ ಗ್ರಾಮಸ್ಥರಿಗೆ ತಡವಾಗಿ ಬೆಳಕಿಗೆ ಬಂದಿದ್ದು ಸ್ಥಳೀಯರು ಉಪಾಯದಿಂದ ಅವನನ್ನು ಕರೆಸಿಕೊಂಡು ವಿಚಾರಣೆ ನಡೆಸಿ ಧರ್ಮದೇಟು ನೀಡಿದ್ದು. ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದ್ದು.
ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿಕೊಟ್ಟಿದ್ದಾರೆ.
ಇನ್ನು ಮುಂದೆ ಈ ವೆಂಕಪ್ಪ ಪರವ ಎಂಬ ಈತ ಮದ್ದು ಕಷಾಯ ಕೊಡುವ ನೆಪದಲ್ಲಿ ನಿಮ್ಮ ಊರಿನಲ್ಲಿ ಕಾಣಿಸಿಕೊಂಡಲ್ಲಿ ಇವರನ್ನು ಸಂಪರ್ಕಿಸಲು ಕೋರಲಾಗಿದೆ.
Tharanath A S I ಪುಂಜಾಲಕಟ್ಟೆ
Mob no : 8105438008

RELATED ARTICLES
- Advertisment -
Google search engine

Most Popular