Monday, December 2, 2024
Homeತುಳು ಭಾಷೆನ.10: ತುಳುಕೂಟ ಪುಣೆ (ರಿ) ವತಿಯಿಂದ ಬೊಳ್ಳಿ ಪರ್ಬ-2024 ತುಳುನಾಡ ಜಾತ್ರೆ

ನ.10: ತುಳುಕೂಟ ಪುಣೆ (ರಿ) ವತಿಯಿಂದ ಬೊಳ್ಳಿ ಪರ್ಬ-2024 ತುಳುನಾಡ ಜಾತ್ರೆ

ಪುಣೆ: ತುಳುಕೂಟ ಪುಣೆ (ರಿ) ಬೊಳ್ಳಿ ಪರ್ಬ-2024 ತುಳುನಾಡ ಜಾತ್ರೆಯು ನವೆಂಬರ್ 10, 2024 ನೇ ರವಿವಾರ ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನ ಬಾಣೇರ್ (ಮರ್ಸಿಡಿಸ್ ಶೋರೂಮ್ ಹತ್ತಿರ) ಪುಣೆ-411 045 ಮಹಾರಾಷ್ಟ್ರದಲ್ಲಿ ನಡೆಯಲಿದೆ.
ಪುಣೆ ತುಳುಕೂಟದ ರಜತ ಸಂಭ್ರಮವು ಬೆಳಿಗ್ಗೆ 9 ರಿಂದ ಸಾಯಂಕಾಲ 9 ರ ವರೆಗೆ ಬಂಟರ ಭವನದ ಲತಾ ಸುಧೀರ್ ಶೆಟ್ಟಿ ಆಡಿಟೋರಿಯಮ್ನನ ನಾಡೋಜ ಡಾ. ಜಿ. ಶಂಕರ್ ವೇದಿಕೆಯಲ್ಲಿ ವಿಜೃಂಭಣೆಯಿಂದ ಜರಗಲಿರುವುದು. ಈ ಕಾರ್ಯಕ್ರಮವು ಪುಣೆಯಲ್ಲಿ ಪ್ರಥಮ ಬಾರಿಗೆ ತುಳುನಾಡ ಜಾತ್ರೆಯಾಗಿ ಸಮಸ್ತ ತುಳು-ಕನ್ನಡ ಬಾಂಧವರಿಂದ ಆಚರಿಸಲ್ಪಡಲಿರುವುದು.

ಈ ಸಂದರ್ಭದಲ್ಲಿ ಪುಣೆಯಲ್ಲಿ ಹಾಗೂ ಹೊರ ರಾಜ್ಯ-ದೇಶಗಳಲ್ಲಿ ವಿಶೇಷ ಸಾಧನೆ ಮಾಡಿದಂತಹ 25 ತುಳುನಾಡಿನ ಸಾಧಕರಿಗೆ “ಗೌರವ ಪ್ರಶಸ್ತಿ”ಗಳನ್ನು ಪ್ರಧಾನಿಸಿ ಗೌರವಿಸಲಾಗುವುದು. ತುಳುನಾಡ ಜಾತ್ರೆಯ ವಿಶೇಷ ಆಕರ್ಷಣೆಯಾಗಿ “ಡಾ. ಪ್ರಕಾಶ್ ಶೆಟ್ಟಿ” ತುಳುನಾಡ ಪ್ರಾಚ್ಯ ಮತ್ತು ಗ್ರಾಮೀಣ ವಸ್ತುಸಂಗ್ರಹಾಲಯ, ತುಳು ಭಜನೆ, ತುಳು ವೈವಿಧ್ಯಮಯ ಕಲಾಕೃತಿ, ತುಳುನಾಡಿನ ವಾದ್ಯ ವೈಭವಗಳು, ಸಭಾ ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಣ್ಯಾತಿಗಣ್ಯರ ಮತ್ತು ಸಹಸ್ರಾರು ತುಳು-ಕನ್ನಡ ಬಂಧುಗಳ ಸಮ್ಮುಖದಲ್ಲಿ ಜರಗಲಿರುವುದು.

ಕದ್ರಿ ಶ್ರೀ ನವನೀತ ಶೆಟ್ಟಿ ಮತ್ತು ಡಾ. ಪ್ರಿಯಾ ಹರೀಶ್ ಕಾರ್ಯಕ್ರಮ ನಿರೂಪಿಸಲಿರುವರು

RELATED ARTICLES
- Advertisment -
Google search engine

Most Popular