ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನವಂಬರ್ 13, 14 ಬುಧವಾರ ಮತ್ತು ಗುರುವಾರದಂದು ಕಾಲೇಜು ವಾರ್ಷಿಕೋತ್ಸವ ನಡೆಯಲಿದೆ. ನವಂಬರ್ 13 ರ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತಮಂಡಳಿಯ ಅಧ್ಯಕ್ಷರಾದ ರವೀಂದ್ರ ಪಿ ಇವರು ವಹಿಸಿಕೊಳ್ಳಲಿದ್ದಾರೆ. ಕಿಶೋರ್ ಕುಮಾರ್ ಬೊಟ್ಯಾಡಿ ಮಾನ್ಯ ಸದಸ್ಯರು, ವಿಧಾನ ಪರಿಷತ್ ಕರ್ನಾಟಕ ಸರಕಾರ ಹಾಗೂ ಹಿರಿಯ ವಿದ್ಯಾರ್ಥಿ ವಿವೇಕಾನಂದ ಪದವಿಪೂರ್ವ ಕಾಲೇಜು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಪ್ರಧಾನ ವಕ್ತಾರರಾಗಿ ರಾಜೇಶ್ ಪದ್ಮಾರ್, ಪ್ರಾಂತ ಪ್ರಚಾರ ಪ್ರಮುಖ್, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕರ್ನಾಟಕ ದಕ್ಷಿಣ ಇವರು ಪಾಲ್ಗೊಳ್ಳಲಿದ್ದಾರೆ. ಸತೀಶ್ ರಾವ್, ಉಪಾಧ್ಯಕ್ಷರು, ಆಡಳಿತಮಂಡಳಿ ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಹಾಗೂ ಹರಿಣಾಕ್ಷಿ ಜೆ ಶೆಟ್ಟಿ, ಅಧ್ಯಕ್ಷರು ಶಿಕ್ಷಕ-ರಕ್ಷಕ ಸಂಘ ವಿವೇಕಾನಂದ ಪದವಿಪೂರ್ವ ಕಾಲೇಜು ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಈ ಸಂದರ್ಭದಲ್ಲಿ ರಾಷ್ಟ್ರ, ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸುವ ʼಸಾಧನಾ ದರ್ಪಣʼ ಕಾರ್ಯಕ್ರಮ ನಡೆಯಲಿದೆ. ಪೂರ್ವಾಹ್ನ 11 ಗಂಟೆಯಿಂದ ವಿಶೇಷ ಕಾರ್ಯಕ್ರಮವಾಗಿ ವಿಠ್ಠಲ ನಾಯಕ್ ಮತ್ತು ಬಳಗದವರಿಂದ ʼಗೀತಾ ಸಾಹಿತ್ಯ ಸಂಭ್ರಮʼ ನಡೆಯಲಿದೆ. ಅಪರಾಹ್ನ 1 ಗಂಟೆಯಿಂದ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ನೃತ್ಯ ವೈಭವ ನಡೆಯಲಿದೆ.
ನವಂಬರ್ 14 ರಂದು ʼಪರಂಪರಾ ದರ್ಶನʼ ಎಂಬ ಶೀರ್ಷಿಕೆಯೊಂದಿಗೆ ಕಾಲೇಜು ವಾರ್ಷಿಕೋತ್ಸವದ ಎರಡನೇ ದಿನದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಮ್. ಗೋಪಾಲಕೃಷ್ಣ ಭಟ್, ಸಂಚಾಲಕರು, ಆಡಳಿತಮಂಡಳಿ ವಿವೇಕಾನಂದ ಪದವಿಪೂರ್ವ ಕಾಲೇಜು ಇವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ. ಕಮಲಾ ಪ್ರಭಾಕರ ಭಟ್, ಕರ್ನಾಟಕ ದಕ್ಷಿಣ / ಹೊಯ್ಸಳ ಪ್ರಾಂತ ಕಾರ್ಯಕಾರಿಣಿ, ಸದಸ್ಯರು ರಾಷ್ಟ್ರಸೇವಿಕಾ ಸಮಿತಿ ಹಾಗೂ ಸುಧನ್ವ ಆಚಾರ್ಯ, ಆಡಳಿತಮಂಡಳಿ ಪಾಲುದಾರರು ಜಿ ಎಲ್ ಸಮೂಹ ಸಂಸ್ಥೆಗಳು ಪುತ್ತೂರು ಹಾಗೂ ಹಿರಿಯ ವಿದ್ಯಾರ್ಥಿ, ವಿವೇಕಾನಂದ ಪದವಿಪೂರ್ವ ಕಾಲೇಜು ಪುತ್ತೂರು ಇವರು ಭಾಗವಹಿಸಲಿರುವರು. ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿ ನಿರ್ದೇಶಕರಾದ ವತ್ಸಲಾ ರಾಜ್ಞಿ , ಇಂದಿರಾ ಬಿ ಕೆ ಹಾಗೂ ಪ್ರಸನ್ನ ಕುಮಾರ್, ಜತೆಕಾರ್ಯದರ್ಶಿ ಶಿಕ್ಷಕ-ರಕ್ಷಕ ಸಂಘ ವಿವೇಕಾನಂದ ಪದವಿಪೂರ್ವ ಕಾಲೇಜು ಇವರು ಉಪಸ್ಥಿತಿ ಇರಲಿದ್ದಾರೆ. ದತ್ತಿನಿಧಿ ಹಾಗೂ ಕಾಲೇಜು ವಾರ್ಷಿಕೋತ್ಸವದ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಈ ದಿನ ನಡೆಯಲಿದೆ. ಸಭಾಕಾರ್ಯಕ್ರಮದ ಬಳಿಕ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ನ.13-14: ವಿವೇಕಾನಂದ ಪದವಿಪೂರ್ವ ಕಾಲೇಜಿನ 2024-25 ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ
RELATED ARTICLES