ಕಾರ್ಕಳ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶೃಂಗೇರಿ ಶ್ರೀ ಶಾರದಾಪೀಠಾಧೀಶ್ವರ ಜಗದ್ಗುರು ಶ್ರೀ ಶ್ರೀ ಶ್ರೀ ಭಾರತೀತೀರ್ಥಮಹಾಸನ್ನಿಧಾನಂಗಳವರ ಪೂರ್ಣಾನುಗ್ರಹದೊಂದಿಗೆ ತತ್ಕರಕಮಲಸಂಜಾತ ಜಗದ್ಗುರು ಶ್ರೀ ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ಅನುಗ್ರಹ ಸಹಿತ ದಿವ್ಯ ಉಪಸ್ಥಿತಿಯಲ್ಲಿ ವಿದ್ವಾನ್ ಡಾ| ಸತ್ಯಕೃಷ್ಣ ಭಟ್ಟರ ಆಚಾರ್ಯತ್ವದಲ್ಲಿ ಗುರುಸ್ವಾಮಿಗಳಾದ ಶ್ರೀ ಬಾಲಕೃಷ್ಣ ಹೆಗ್ಡೆ ಹಾಗೂ ಶ್ರೀ ಮಾಧವರಾಯ ಪ್ರಭು ನಿಡ್ಡೋಡಿ ಇವರ ಯಾಜಮಾನ್ಯದಲ್ಲಿ ಶತಚಂಡಿಕಾಯಾಗ ಹಾಗೂ ಪೂರ್ಣಹುತಿ ಜೊತೆಗೆ ಮಹಾಪೂಜೆ, ಪ್ರಸಾದ ವಿತರಣೆ ಜಗದ್ಗುರು ಶ್ರೀ ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರಿಂದ ಆಶೀರ್ವಚನ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ, ಮಹಾಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.
ದಿನಾಂಕ 16-11-2024ನೇ ಶನಿವಾರ ಅಯ್ಯಪ್ಪ ವೃತ ಮಾಲಾಧಾರಣೆ ಆರಂಭದಿಂದ ದಿನಾಂಕ 08-01-2025ನೇ ಬುಧವಾರದವರೆಗೆ ಬಾಲಾಜಿ ಅಯ್ಯಪ್ಪ ಮಂದಿರದಲ್ಲಿ ಮಧ್ಯಾಹ್ನ ನಿತ್ಯ ಅನ್ನದಾನ ಸಾಯಂಕಾಲ 6.00ರಿಂದ 8.00ರವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ದಿನಾಂಕ 06-12-2024ನೇ ಶುಕ್ರವಾರದಿಂದ ದಿನಾಂಕ 12-12-2024ನೇ ಗುರುವಾರದವರೆಗೆ ಪ್ರತೀ ದಿನ ಸಾಯಂ. ಗಂಟೆ 4.00ರಿಂದ 6.00ರವರೆಗೆ ಶ್ರೀಮದ್ ಭಾಗವತ ಸಪ್ತಾಹ ಯಜ್ಞ ವಿದ್ವಾನ್ ಡಾ. ಸೋಂದಾ ಭಾಸ್ಕರ್ ಭಟ್, ಕಟೀಲು ಇವರಿಂದ 2 07-12-2024 2 ಸಾಯಂಕಾಲ ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ಭಜನಾ ಮಂಗಳೋತ್ಸವ ದಿನಾಂಕ 08-12-2024ನೇ ಸೋಮವಾರ ಬೆಳಗ್ಗೆ ಸೂರ್ಯೋದಯಕ್ಕೆ ಪಡಿಪೂಜೆ ದಿನಾಂಕ 13-12-2024ನೇ ಶುಕ್ರವಾರದಂದು ಮಧ್ಯಾಹ್ನ ಗಂಟೆ 1.30ರಿಂದ ಭಕ್ತಿ ಭಾವ ಗಾನ ಮಂಜರಿ (ಕರೋಕೆ ಗೀತೆಗಳು) ಸಾಯಂಕಾಲ ಗಂಟೆ 5.00ರಿಂದ ಧಾರ್ಮಿಕ ಕಾರ್ಯಕ್ರಮದ ಫಲಶ್ರುತಿ ಕಥನ ತದನಂತರ ಸಾಂಸ್ಕೃತಿಕ ಕಾರ್ಯಕ್ರಮ ದಿನಾಂಕ 14-12-2024ನೇ ಶನಿವಾರ ಬೆಳಿಗ್ಗೆ ಮೃತ್ಯುಂಜಯ ಹೋಮ ತುಳಸಿ ಹಾಗೂ ಪುಷ್ಪಗಳಿಂದ ಲಕ್ಷಾರ್ಚನೆ, ಅಪರಾಹ್ನ, ಗಂಟೆ 3.00ಕ್ಕೆ ಶನಿಪೂಜೆ ಸಾಯಂಕಾಲ ಗಂಟೆ 6.00ರಿಂದ ಗುರುವಂದನೆ ಮತ್ತು ಸಭಾ ಕಾರ್ಯಕ್ರಮ ರಾತ್ರಿ ಗಂಟೆ 8.00ಕ್ಕೆ “ಶಿವದೂತೆ ಗುಳಿಗೆ” ತುಳು ಪೌರಾಣಿಕ ನಾಟಕ ನಡೆಯಲಿದೆ.
ಚಂಡಿಕಾಯಾಗದ ಪೂರ್ಣಾಹುತಿ ನಂತರ ಜಗದ್ಗುರುಗಳವರಿಗೆ ಪಾದಪೂಜೆ, ಭಿಕ್ಷಾವಂದನೆ, ಫಲಸಮರ್ಪಣೆ ನಡೆಸಲು ಸಾರ್ವಜನಿಕರಿಗೆ ಅವಕಾಶವಿರುತ್ತದೆ.