ನ.3 – 21 ; ಮಂಗಳೂರಿನಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರ ಮೊಕ್ಕಾಂ
ಮಂಗಳೂರು, ಅ.29;ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ, ಗೋವಾದ ಪರಮಪೂಜ್ಯ ಶ್ರೀಮತ್ ವಿದ್ಯಾಧೀಶ ತೀರ್ಥ ಶ್ರೀ ಪಾದ ಒಡೇರಾ ಸ್ವಾಮೀಜಿಯವರು ಮಂಗಳೂರು ರಥಬೀದಿ ಶ್ರೀ ಗೋಕರ್ಣ ಮಠದ ಶಾಖಾ ಮಠದಲ್ಲಿ ನ.3 ರಿಂದ ನ.21ರವರೆಗೆ ಮೊಕ್ಕಾಂ ಹೂಡಲಿದ್ದಾರೆ.ಈ ಹಿನ್ನೆಲೆಯಲ್ಲಿ ನ.17ರಂದು ಒಂದೇ ದಿನದಲ್ಲಿ 55ಲಕ್ಷ ಜಪ ಸಂಖ್ಯೆಯ ಗುರಿ ಹೊಂದಿರುವ ಶ್ರೀ ರಾಮನಾಮ ಜಪ ಮಹಾ ಅಭಿಯಾನ ಮಂಗಲರಾಮಃ ಕೇಂದ್ರದಲ್ಲಿ ನಡೆಯಲಿದೆ. ಎಪ್ರಿಲ್ 17 ರಂದು ಆರಂಭಿಸಲಾದ ಶ್ರೀ ರಾಮನಾಮ ಜಪ ಅಭಿಯಾನದಲ್ಲಿ , ಮಂಗಲರಾಮಃ ಕೇಂದ್ರದಲ್ಲಿ ಈಗಾಗಲೇ 10.50 ಕೋಟಿ ಶ್ರೀ ರಾಮನಾಮ ಜಪ ನಡೆದಿದೆ. ನ 18,2025 ರೊಳಗೆ 25ಕೋಟಿ ಶ್ರೀ ರಾಮನಾಮ ಜಪ ತಲುಪುವ ಉದ್ದೇಶ ಹೊಂದಲಾಗಿದೆ.
ಪರಮಪೂಜ್ಯ ಶ್ರೀ ಸ್ವಾಮೀಜಿಯವರು ಎರಡನೇ ಬಾರಿಯ ಈ ಐತಿಹಾಸಿಕ ಮೊಕ್ಕಾಂ ನ ಸಂದರ್ಭದಲ್ಲಿ ಸಮಾಜದ ಭಕ್ತ ಬಾಂಧವರು ಆಗಮಿಸಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ಶ್ರೀರಾಮ ವೀರ ವಿಠಲ ದೇವರ ಕೃಪೆಗೆ ಪಾತ್ರರಾಗ ಬೇಕಾಗಿ ಹಾಗೂ ಪರಮಪೂಜ್ಯ ಶ್ರೀ ಸ್ವಾಮೀಜಿಗಳ ಆಶೀರ್ವಾದ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಪ್ರಕಟಣೆ ತಿಳಿಸಿದೆ.
ನ.17; ರಥಬೀದಿ ಶ್ರೀ ಗೋಕರ್ಣ ಮಠದಲ್ಲಿ ಶ್ರೀರಾಮನಾಮ ಜಪ ಮಹಾ ಅಭಿಯಾನ
RELATED ARTICLES