ಕಾಸರಗೋಡು :ಕರ್ನಾಟಕ ಸಂಭ್ರಮ 50 ಸವಿನೆನಪಿಗಾಗಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ.), ಕಾಸರಗೋಡು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರಕಾರ ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಕೇರಳ ಗಡಿನಾಡ ಘಟಕ, ಕಾಸರಗೋಡು ಭಾರತ್ ಭವನ, ತಿರುವನಂತಪುರ, ಕೇರಳ ಸರಕಾರ ಆಶ್ರಯದಲ್ಲಿ ಅನಂತಪುರಿ ಗಡಿನಾಡ ಕನ್ನಡ ಸಂಸ್ಕೃತಿ ಉತ್ಸವ 2024 ನವೆಂಬರ್ 27, 2024 ಬುಧವಾರ ಬೆಳಿಗ್ಗೆ 9.00 ರಿಂದ ಭಾರತ್ ಭವನ, ಸಿ.ವಿ. ರಾಮನ್ ಪಿಳ್ಳೆ ರಸ್ತೆ, ಪೌಂಡ್ ಕಾಲನಿ, ಕೈಕಾಡ್, ತಿರುವನಂತಪುರ, ಕೇರಳದಲ್ಲಿ ನಡೆಯಲಿದೆ.
ಬೆಳಿಗ್ಗೆ 9 ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಗಂಟೆ 10.00 ಕ್ಕೆ ಉದ್ಘಾಟನಾ ಸಮಾರಂಭ, ಗಂಟೆ 2.00 ರಿಂದ 3.00 ಗಂಟೆಯವರೆಗೆ ಗಡಿನಾಡ ಕನ್ನಡಿಗರ ಸಮಸ್ಯೆ ಮತ್ತು ಪರಿಹಾರದ ಕುರಿತು ವಿಚಾರಗೋಷ್ಟಿ, ನಂತರ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ಹಾಗೂ 4.30 ರಿಂದ ಸಮಾರೋಪ ಸಮಾರಂಭ ನಡೆಯಲಿದೆ.