Sunday, July 14, 2024
Homeಮೂಡುಬಿದಿರೆಈಗ ಗೂಗಲ್‌ ಟ್ರಾನ್ಸ್‌ಲೇಟರ್‌ನಲ್ಲಿ ತುಳು ಭಾಷಾಂತರ ಕೂಡ ಲಭ್ಯ! | ಇಂಗ್ಲಿಷ್‌ ಪದಗಳ ಅರ್ಥ ತುಳುವಿನಲ್ಲೇ...

ಈಗ ಗೂಗಲ್‌ ಟ್ರಾನ್ಸ್‌ಲೇಟರ್‌ನಲ್ಲಿ ತುಳು ಭಾಷಾಂತರ ಕೂಡ ಲಭ್ಯ! | ಇಂಗ್ಲಿಷ್‌ ಪದಗಳ ಅರ್ಥ ತುಳುವಿನಲ್ಲೇ ಅರಿಯಲು ಇಲ್ಲಿದೆ ಲಿಂಕ್

ಮೂಡುಬಿದಿರೆ: ತುಳು ಭಾಷಾ ಪ್ರೇಮಿಗಳಿಗೊಂದು ಸಿಹಿ ಸುದ್ದಿ. ಕ್ಷಣಾರ್ಧದಲ್ಲಿ ಯಾವುದೇ ಭಾಷೆಯ ಪದಗಳನ್ನು ಭಾಷಾಂತರಿಸಬಲ್ಲ ಗೂಗಲ್‌ ಟ್ರಾನ್ಸ್‌ಲೇಟರ್‌ನಲ್ಲಿ ಈಗ ತುಳು ಕೂಡ ಮಾನ್ಯತೆ ಪಡೆದಿದೆ. ಈಗ ನೀವು ಇಂಗ್ಲಿಷ್ ಭಾಷೆಯ ಪದಗಳನ್ನು ತುಳುವಿಗೆ ಭಾಷಾಂತರಿಸಿಕೊಳ್ಳಬಹುದು.
ಅಂದರೆ ಇಲ್ಲಿವರೆಗೆ ಭಾರತದ ಪ್ರಮುಖ ಭಾಷೆಗಳು ಮಾತ್ರ ಗೂಗಲ್‌ ಟ್ರಾನ್ಸ್‌ಲೇಟರ್‌ನಲ್ಲಿ ಭಾಷಾಂತರಕ್ಕೆ ಲಭ್ಯವಿತ್ತು. ಈಗ ತುಳುನಾಡಿನ ಜನರಿಗೆ ಇಂಗ್ಲಿಷ್‌ ಪದಗಳನ್ನು ತುಳುವಿನಲ್ಲೇ ಅರ್ಥೈಸಿಕೊಳ್ಳಲು ಅವಕಾಶ ಸಿಕ್ಕಿದೆ. ಆ ಮೂಲಕ ಜಗತ್ತಿನ ಅತಿದೊಡ್ಡ ಜಾಲತಾಣ ಗೂಗಲ್‌ನಲ್ಲಿ ತುಳುವಿಗೂ ಗೌರವ ಸಿಕ್ಕಂತಾಗಿದೆ. ಈ ಬಗ್ಗೆ ತುಳು ಭಾಷಾ ಪ್ರೇಮಿಗಳು ಹರ್ಷ ವ್ಯಕ್ತಪಡಿಸಿದ್ದು, ಗೂಗಲ್‌ ಟ್ರಾನ್ಸ್‌ಲೇಟರ್‌ ತಂಡಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಇದು ಅನ್ಯ ಭಾಷಿಕರಿಗೆ ತುಳು ಪದಗಳನ್ನು ಅರ್ಥೈಸಿಕೊಳ್ಳುವುದಕ್ಕೂ ಸಹಾಯಕವಾಗಲಿದೆ. ಅಲ್ಲದೆ ತುಳುವರಿಗೆ ತಮ್ಮ ಮಾತೃಭಾಷೆಯಲ್ಲೇ ಇಂಗ್ಲಿಷ್‌ ಪದಗಳನ್ನು ಅರ್ಥೈಸಿಕೊಳ್ಳಲು ನೆರವಾಗಲಿದೆ. ಜೊತೆಗೆ ತುಳು ಶಬ್ದಗಳ ಇಂಗ್ಲಿಷ್‌ ಅರ್ಥವನ್ನೂ ಇಲ್ಲಿ ತಿಳಿದುಕೊಳ್ಳಲು ಅವಕಾಶವಾಗಲಿದೆ.


ಇಂಗ್ಲಿಷ್‌ ಭಾಷೆಯಿಂದ ತುಳುವಿಗೆ ಭಾಷಾಂತರ ಮಾಡಬಹುದಾದ ಗೂಗಲ್‌ ಟ್ರಾನ್ಸ್‌ಲೇಟರ್‌ ಲಿಂಕ್‌ ಇಲ್ಲಿ ನೀಡಲಾಗಿದೆ. ಅದರ ಮೇಲೆ ಕ್ಲಿಕ್‌ ಮಾಡಿ ಇಂಗ್ಲಿಷ್‌ ಪದಗಳ ತುಳು ಅರ್ಥವನ್ನು ಪಡೆಯಿರಿ.

https://translate.google.com/?sl=en&tl=tcy&text=rain%20will%20come%20&op=translate

RELATED ARTICLES
- Advertisment -
Google search engine

Most Popular