ಮೂಡುಬಿದಿರೆ: ಎಸ್.ಎನ್. ಮೂಡಬಿದ್ರೆ ಪಾಲಿಟೆಕ್ನಿಕ್ ಮೂಡುಬಿದಿರೆ ಇಲ್ಲಿ 2001 ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ಸೇವಾ ಯೋಜನೆ (NSS) ಯು 24 ವರ್ಷಗಳನ್ನು ಪೂರೈಸಿ, ಇದೀಗ 25ನೇ ವರ್ಷಕ್ಕೆ ಕಾಲಿಡುತ್ತಿದ್ದು ರಜತ ಮಹೋತ್ಸವ ದ ಸಂಭ್ರಮದಲ್ಲಿ ಇದ್ದೇವೆ.
ಈ ಸಂಭ್ರಮಾಚರಣೆಯ ಜೊತೆಗೆ 2025-26ನೇ ಸಾಲಿನ NSS ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ದಿನಾಂಕ 22-07-2025 ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರು, ಮಾಜಿ ಸಚಿವರಾದ ಶ್ರೀ.ಕೆ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಲಿರುವ ಈ ಸಮಾರಂಭವನ್ನು ತಾಂತ್ರಿಕ ಶಿಕ್ಷಣ ಇಲಾಖೆ, ಬೆಂಗಳೂರು,ಇಲ್ಲಿನ N.S.S ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಗುರುಪ್ರಸಾದ್ ಹೂಗಾರ್ ಇವರು ಉದ್ಘಾಟಿಸಲಿದ್ದಾರೆ.