ಬೆಂಗಳೂರು: ಸಾರ್ವಜನಿಕ ಬೋರ್ ವೆಲ್ ಪಕ್ಕದಲ್ಲೇ ಇನ್ನೊಂದು ಬೋರ್ ವೆಲ್ ಕೊರೆಸಲು ಮುಂದಾದ ಬಿಲ್ಡರ್ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿ, ಬೋರ್ ವೆಲ್ ಕೊರೆಯುವುದನ್ನು ತಡೆದಿದ್ದಾರೆ. ವೈಟ್ ಫೀಲ್ಡ್ ನ ಅಂಬೇಡ್ಕರ್ ನಗರದಲ್ಲಿ ಈ ಘಟನೆ ನಡೆದಿದೆ. ಪೇಯಿಂಗ್ ಗೆಸ್ಟ್ ವಸತಿ ನಿಲಯ ನಿರ್ಮಿಸುತ್ತಿರುವ ಆಂಧ್ರ ಮೂಲದ ಬಿಲ್ಡರ್ ಒಬ್ಬರು ಬೋರ್ ವೆಲ್ ಕೊರೆಸಲು ಮುಂದಾಗಿದ್ದರು. ಅನುಮತಿ ಪಡೆದು ಬೋರ್ ವೆಲ್ ಕೊರೆಯಲು ಮುಂದಾಗಿದ್ದರೂ. ಸ್ಥಳೀಯ ನಿವಾಸಿಗಳ ನೀರಿನ ಅಗತ್ಯ ಪೂರೈಸುವ ಸಾರ್ವಜನಿಕ ಬೋರ್ ವೆಲ್ ಗೆ ತೊಂದರೆಯಾಗಲಿದೆ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು.