Monday, December 2, 2024
HomeUncategorizedನ. 24: ಮಂಗಳೂರು ವಿಭಾಗ ಮಟ್ಟದ ಜಿನ ಭಜನಾ ಸ್ಫರ್ಧೆ ಬೆಳ್ತಂಗಡಿಯಲ್ಲಿ

ನ. 24: ಮಂಗಳೂರು ವಿಭಾಗ ಮಟ್ಟದ ಜಿನ ಭಜನಾ ಸ್ಫರ್ಧೆ ಬೆಳ್ತಂಗಡಿಯಲ್ಲಿ

ಭಾರತೀಯ ಜೈನ್‌ಮಿಲನ್ ರಾಷ್ಟಿçÃಯ ಕಾರ್ಯಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್ ಮತ್ತು ರಾಷ್ಟಿçÃಯ ಉಪಾಧ್ಯಕ್ಷರಾದ ಡಿ. ಅನಿತಾ ಸುರೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಜೈನ್‌ಮಿಲನ್  ಸಹಯೋಗದೊಂದಿಗೆ ನ. ೨೪ ರಂದು ಭಾನುವಾರ ಬೆಳ್ತಂಗಡಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ಮಂಗಳೂರು ವಿಭಾಗಮಟ್ಟದ ಜಿನ ಭಜನಾ ಸ್ಪರ್ಧೆ ನಡೆಯಲಿದೆ ಎಂದು ಜಿನ ಭಜನಾ ಸ್ಪರ್ಧೆಯ ಸಂಯೋಜಕರಾದ ಉಜಿರೆಯ ಸೋನಿಯಾ ಯಶೋವರ್ಮ ಮತ್ತು ಬೆಳ್ತಂಗಡಿ ಜೈನ್‌ಮಿಲನ್ ಅಧ್ಯಕ್ಷರಾದ ಡಾ. ನವೀನ್ ಕುಮಾರ್ ಜೈನ್, ಉಜಿರೆ ತಿಳಿಸಿದ್ದಾರೆ.
ನ.೨೪ ರಂದು ಭಾನುವಾರ ಪೂರ್ವಾಹ್ನ ಗಂಟೆ ೯.೩೦ಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಜಿನ ಭಜನಾ ಸ್ಪರ್ಧೆ ಉದ್ಘಾಟಿಸುವರು.
ಭಾರತೀಯ ಜೈನ್‌ಮಿಲನ್ ರಾಷ್ಟಿçÃಯ ಉಪಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್ ಅಧ್ಯಕ್ಷತೆ ವಹಿಸುವರು.
ಪೆರಿಂಜೆ, ಪಡ್ಯಾರಬೆಟ್ಟ ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಜೀವಂಧರ ಕುಮಾರ್, ವೇಣೂರು ದಿಗಂಬರ ಜೈನತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ ಪ್ರವೀಣಕುಮಾರ್ ಇಂದ್ರ ಮತ್ತು ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಮುಖ್ಯ ಅತಿಥಿಗಳಾಗಿ  ಶುಭಾಶಂಸನೆ ಮಾಡುವರು.
ಸಂಜೆ ಗಂಟೆ ೪.೩೦ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸುದರ್ಶನ ಜೈನ್, ಬಂಟ್ವಾಳ ಸಮಾರೋಪ ಭಾಷಣ ಮಾಡುವರು.
ಭಾರತೀಯ ಜೈನ್‌ಮಿಲನ್ ರಾಷ್ಟಿçÃಯ ಕಾರ್ಯಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್ ಅಧ್ಯಕ್ಷತೆ ವಹಿಸುವರು.

ಭವ್ಯ ಪಿಂಛಿ ಪರಿವರ್ತನಾ ಸಮಾರಂಭ
ನಾರಾವಿ ಬಳಿ ಇರುವ ಹೊಸ್ಮಾರು ಸಿದ್ಧರವನ ಭಗವಾನ್ ಮಹಾವೀರಸ್ವಾಮಿ ಬಸದಿಯಲ್ಲಿ ಚಾತುರ್ಮಾಸ ವೃತಾಚರಣೆಯಲ್ಲಿರುವ ಪೂಜ್ಯ ಆರ್ಯಿಕಾ ಮುಕ್ತಿಮತಿ ಮಾತಾಜಿ ಅವರ ಭವ್ಯ ಪಿಂಛಿ ಪರಿವರ್ತನಾ ಸಮಾರಂಭ ಇದೇ ೧೭ ರಂದು ಭಾನುವಾರ  ನಡೆಯಲಿದೆ ಎಂದು ಚಾತುರ್ಮಾಸ ಸಮಿತಿ ಅಧ್ಯಕ್ಷ ಎನ್. ಪ್ರೇಮ್ ಕುಮಾರ್ ಹೊಸ್ಮಾರು ತಿಳಿಸಿದ್ದಾರೆ.
ಭಾನುವಾರ ಬೆಳಿಗ್ಯೆ ಗಂಟೆ ೭.೩೦ ರಿಂದ ಬಸದಿಯಲ್ಲಿ ಸಾಮೂಹಿಕ ಪಂಚಪರಮೇಷ್ಠಿ ಆರಾಧನೆ ನಡೆಯಲಿದೆ.
ಅಪರಾಹ್ನ ಗಂಟೆ ೨.೩೦ರಿಂದ ಪೂಜ್ಯ ಆರ್ಯಿಕಾ ಮುಕ್ತಿಮತಿ ಮಾತಾಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಕಾರ್ಕಳ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡುವರು.
ಭಾರತೀಯ ಜೈನ್‌ಮಿಲನ್ ರಾಷ್ಟಿçÃಯ ಕಾರ್ಯಾಧ್ಯಕ್ಷ  ಡಿ. ಸುರೇಂದ್ರ ಕುಮಾರ್ ಅಧ್ಯಕ್ಷತೆ ವಹಿಸುವರು.
ಭಾರತೀಯ ಜೈನ್‌ಮಿಲನ್ ರಾಷ್ಟಿçÃಯ ಮಹಿಳಾ ಕಾರ್ಯಾಧ್ಯಕ್ಷರಾದ ಅನಿತಾ ಸುರೇಂದ್ರ ಕುಮಾರ್, ಸುದರ್ಶನ್ ಜೈನ್, ಬಂಟ್ವಾಳ ಮತ್ತು ಮಂಗಳೂರಿನ ಜೈನ್ ಟ್ರಾವೆಲ್ಸ್ ಮಾಲಕ ರತ್ನಾಕರ್ ಜೈನ್ ಮುಖ್ಯ ಅತಿಥಿಗಳಾಗಿ ಶುಭಾಶಂಸನೆ ಮಾಡುವರು.
ಹೊರನಾಡು ಜಯಶ್ರೀ ಜೈನ್ ಮತ್ತು ಬಳಗದವರಿಂದ ಜಿನಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.

ನ. ೧೪: ಧರ್ಮಸ್ಥಳದಲ್ಲಿ ಆಸನ ವ್ಯವಸ್ಥೆಗಳನ್ನು ಹೊಂದಿರುವ ಭೋಜನಾಲಯ ಉದ್ಘಾಟನೆ
 ಧರ್ಮಸ್ಥಳದಲ್ಲಿ ಅನ್ನಪೂರ್ಣ ಭೋಜನಾಲಯದ ಮೇಲಂತಸ್ತಿನಲ್ಲಿ ನಿರ್ಮಿಸಲಾದ ಸುಸಜ್ಜಿತ ಆಸನ ವ್ಯವಸ್ಥೆಗಳನ್ನು ಹೊಂದಿರುವ ಭೋಜನಾಲಯವನ್ನು ಇದೇ ೧೪ ರಂದು ಗುರುವಾರ ಸಂಜೆ ೫ ಗಂಟೆಗೆ ಕಂಚಿ ಕಾಮಕೋಟಿ ಪೀಠಾಧಿಪತಿ ಪೂಜ್ಯ ಶಂಕರವಿಜಯೇAದ್ರಸರಸ್ವತಿ ಶಂಕರಾಚಾರ್ಯ ಸ್ವಾಮೀಜಿ ಉದ್ಘಾಟಿಸುವರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು.
ಶಾಸಕರುಗಳಾದ ಹರೀಶ್ ಪೂಂಜ ಮತ್ತು ಕೆ. ಪ್ರತಾಪಸಿಂಹ ನಾಯಕ್, ಕೆ.ಪಿ. ಸಿ.ಸಿ. ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಕೆ. ಹರೀಶ್ ಕುಮಾರ್ ಮತ್ತು ಡಿ. ಸುರೇಂದ್ರ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಾಶಂಸನೆ ಮಾಡುವರು.

RELATED ARTICLES
- Advertisment -
Google search engine

Most Popular